ದೇಶ

ಪತ್ನಿಯ ಶೀಲಶಂಕಿಸಿ ತಲೆ ಕತ್ತರಿಸಿದ ಪತಿ: ರುಂಡ ಸಮೇತ ಠಾಣೆಗೆ ಬಂದ ಭೂಪ

Shilpa D

ಬಂದಾ: ಪತ್ನಿಯ ಶೀಲ ಶಂಕಿಸಿದ ಪತಿ ಹೆಂಡತಿ ತಲೆ ಕತ್ತರಿಸಿ ನಂತರ ರುಂಡದ ಸಮೇತ ಪೊಲೀಸರಿಗೆ ಶರಣಾಗಿರುವ ಭಯಾನಕ ಘಟನೆ ಶುಕ್ರವಾರ ನಡೆದಿದೆ.

ಚಿನಾರ್ ಯಾದವ್ ತನ್ನ ಪತ್ನಿ ವಿಮ್ಲಾ ಜೊತೆ ಬೆಳಗ್ಗೆ 7.30ರ ವೇಳೆಗೆ ಜಗಳ ತೆಗೆದಿದ್ದಾನೆ, ನಂತರ ಇಬ್ಬರ ನಡುವಿನ ಜಗಳ ತಾರಕಕ್ಕೇರಿ ಹರಿತವಾದ ಆಯುಧದಿಂದ ಪತ್ನಿ ತಲೆ ಕತ್ತರಿಸಿದ್ದಾನೆ.

ನೇತಾನಗರದ ನಿವಾಸಿಯಾದ ಚಿನ್ನಾರ್ ಯಾದವ್  ಪತ್ನಿಯ ತಲೆ ಸಮೇತ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯ ಕತ್ತರಿಸಿದ ತಲೆಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. 
 

SCROLL FOR NEXT