ದೇಶ

ಜೆಮ್ ಶೆಡ್ ಪುರ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಐವರ ಬಂಧನ

Shilpa D

ಜೆಮ್ ಶೆಡ್ ಪುರ: ಜಾರ್ಖಂಡ್ ನ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ.

ಬಾಲಕಿ ತನ್ನ ಬಾಯ್ ಫ್ರೆಂಡ್ ಜೊತೆ  ಮಂಗಳವಾರ ಬಾಗ್ ಬೆರಾ  ಎಂಬ ಸ್ಥಳಕ್ಕೆ ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿಗಳು ಆಕೆಯನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ.

ನಂತರ ಆಕೆಯ ಬಾಯ್ ಫ್ರೆಂಡ್ ನನ್ನು ಮರಕ್ಕೆ ಕಟ್ಟಿ ಆಕೆಯ ಮೇಲೆ ಅತ್ಯಾಚರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಅಪ್ರಾಪ್ತನಿದ್ದು ಆತನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಉಳಿದವರನ್ನು ಜೈಲಿನಲ್ಲಿರಿಸಲಾಗಿದೆ.

ಬಂಧಿತರಿಂದ ಎರಡು ಸಜೀವ ಗುಂಡು  ಮತ್ತು ದೇಶೀಯ  ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ,  ಪ್ರಕರಣ  ಬೆಳಕಿಗೆ ಬಂದ ಕೂಡಲ್ ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಾನು ಡ್ಯಾನ್ಸ್ ಕ್ಲಾಸ್ ಮುಗಿಸಿ ವಾಪಸ್ ಬರುವಾಗ ಘಟನೆ ನಡೆಯಿತು ಆರಂಭದಲ್ಲಿ ಬಾಲಕಿ ಹೇಳಿಕೆ ನೀಡಿದ್ದಳು.ಆದರೆ ತನಿಖೆ ವೇಳೆ ಆಕೆ ತಪ್ಪು ಮಾಹಿತಿ ನೀಡಿದ್ದಳು ಎಂದು ತಿಳಿದು ಬಂದಿದೆ.
 

SCROLL FOR NEXT