ದೇಶ

ಬದ್ಗಾಮ್ ನಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ, ನಾಲ್ವರ ಬಂಧನ

Vishwanath S

ಶ್ರೀನಗರ: ಮಧ್ಯ ಕಾಶ್ಮೀರ ಜಿಲ್ಲೆಯಾದ ಬದ್ಗಾಮ್ನಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ನಾಲ್ವರನ್ನು ಮಂಗಳವಾರ ಬಂಧಿಸಲಾಗಿದೆ.  

ನಿರ್ದಿಷ್ಟ ಮಾಹಿತಿಯನ್ನು ಆಧರಿಸಿ ಬದ್ಗಾಮ್ ನ ಚಾದೂರಾದಲ್ಲಿ ನಡೆಸಲಾದ ಶೋಧ ಕಾರ್ಯಾಚರಣೆ ವೇಳೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಂಧಿತರಿಂದ ಎರಡು ಗ್ರೆನೇಡ್‍ ಗಳು, ಪಿಸ್ತೂಲ್ ಮ್ಯಾಗಜೀನ್‍, 8 ಪಿಸ್ತೂಲ್ ಗುಂಡು ಸುತ್ತುಗಳು ಮತ್ತು 30 ಎಕೆ -47 ಗುಂಡು ಸುತ್ತುಗಳನ್ನು ಒಳಗೊಂಡಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಆರೋಪಿಗಳನ್ನು ತಾಹಿರ್ ಜಹಾಂಗೀರ್ ದಾರ್, ಅರ್ಷಿದ್ ಮುಷ್ತಾಕ್ ಬಘಾಟ್, ನಿಸಾರ್ ಬಶೀರ್ ಬಾಗಾಟ್ ಮತ್ತು ಆದಿಲ್ ಬಶೀರ್ ವಾನಿ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT