ದೇಶ

ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಪೈಕಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಪ್ರಮಾಣ ಶೇ.47: ಆರೋಗ್ಯ ಇಲಾಖೆ

Srinivasamurthy VN

ನವದೆಹಲಿ: ಕೊರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಪೈಕಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಪ್ರಮಾಣ ಶೇ.47ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆರೋಗ್ಯ ಸಚಿವಾಲಯ, ಕೊರೊನಾ ವೈರಸ್‌ ಸೋಂಕಿನಿಂದ ಮೃತಪಟ್ಟವರ ಪೈಕಿ ಶೇ 47ರಷ್ಟು ಮಂದಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಮೃತರ ಪೈಕಿ ಶೇ 70ರಷ್ಟು ಪುರುಷ ಸೋಂಕಿತರು ಹಾಗೂ ಶೇ 30ರಷ್ಟು ಮಹಿಳಾ ಸೋಂಕಿತರು ಎಂದು  ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.

‘ಶೇ 53ರಷ್ಟು ಕೋವಿಡ್ ಮರಣಗಳು 60 ಮತ್ತು ಅದಕ್ಕಿಂತ ಮೇಲಿನ ವಯಸ್ಸಿನವರದ್ದಾಗಿದ್ದರೆ, 45-60 ವರ್ಷ ವಯಸ್ಸಿನ ಶೇ.35ರಷ್ಟು ಸೋಂಕಿತರು ಮೃತಪಟ್ಟಿದ್ದಾರೆ. 26-44 ವಯಸ್ಸಿನವರಲ್ಲಿ ಶೇ.10ರಷ್ಟು ಸಾವು ಸಂಭವಿಸಿದೆ. 18–25 ವಯಸ್ಸಿನವರಲ್ಲಿ ಹಾಗೂ 17ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ  ತಲಾ ಶೇ.1ರಷ್ಟು ಮರಣ ಸಂಭವಿಸಿದೆ, 60 ವರ್ಷಕ್ಕಿಂತ ಮೇಲಿನವರಲ್ಲಿ ಅನ್ಯ ಆರೋಗ್ಯ ಸಮಸ್ಯೆಗಳನ್ನೂ ಹೊಂದಿದ್ದವರ ಸಾವಿನ ಪ್ರಮಾಣ ಶೇ 24.6ರಷ್ಟಿದ್ದರೆ ಇತರೆ ಯಾವುದೇ ಸಮಸ್ಯೆ ಇಲ್ಲದವರ ಮರಣ ಪ್ರಮಾಣ ಶೇ 4.8ರಷ್ಟಿದೆ. ಒಟ್ಟು ಸಾವಿನ ಪ್ರಮಾಣದಲ್ಲಿ ಶೇ 17.9ರಷ್ಟು ಇತರ ಆರೋಗ್ಯ  ಸಮಸ್ಯೆ ಹೊಂದಿರುವವರದ್ದಾಗಿದ್ದರೆ ಕೋವಿಡ್‌ನಿಂದ ಮಾತ್ರ ಸಾವಿಗೀಡಾದವರ ಪ್ರಮಾಣ ಶೇ 1.2ರಷ್ಟಿದೆ ಎಂದು ಭೂಷಣ್ ತಿಳಿಸಿದ್ದಾರೆ.

SCROLL FOR NEXT