ದೇಶ

ಖತರ್ನಾಕ್ ಸ್ಮಗ್ಲರ್ ಗಳು: 'ಆಚಿ' ಸ್ಪೈಸಿ ಪೌಡರ್ ಪ್ಯಾಕೆಟ್ ನಲ್ಲಿ 'ಸ್ಯೂಡೋಫೆಡ್ರಿನ್' ಪೌಡರ್ ಕಳ್ಳ ಸಾಗಣೆ, ನಾಲ್ವರ ಬಂಧನ

Srinivasamurthy VN

ಚೆನ್ನೈ: ಚೆನ್ನೈ ವಿಮಾನ ನಿಲ್ದಾಣದಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 'ಸ್ಯೂಡೋಫೆಡ್ರಿನ್' ಮಾದಕ ದ್ರವ್ಯವನ್ನು ಕಳ್ಳಸಾಗಣೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ವೊಂದನ್ನು ಬಂಧಿಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ಸ್ಪೈಸಿ ಪದಾರ್ಥಗಳ ಮಾರಾಟ ಸಂಸ್ಥೆ 'ಆಚಿ' ಪ್ಯಾಕೆಟ್ ಗಳೊಳಗೆ 'ಸ್ಯೂಡೋಫೆಡ್ರಿನ್' ಎಂಬ ಮಾದಕ ದ್ರವ್ಯವನ್ನು ಇಟ್ಟು ಕಳ್ಳ ಸಾಗಣೆಗೆ ಯತ್ನಿಸಿದ್ದ ನಾಲ್ವರ ತಂಡವನ್ನು ಚೆನ್ನೈ ಏರ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದ ಕೊರಿಯರ್ ಏರ್ ಟರ್ಮಿನಲ್ ನಲ್ಲಿ  ಶಂಕಾಸ್ಪದವಾಗಿ ಬಾಕ್ಸ್ ಗಳನ್ನು ತೆಗೆದುಕೊಂಡು ಹೋಗಲು ಯತ್ನಿಸುತ್ತಿದ್ದ ನಾಲ್ವರನ್ನು ಶೋಧಕ್ಕೆ ಒಳಪಡಿಸಿದಾಗ ಅವರು ತಂದಿದ್ದ ಬಾಕ್ಸ್ ನಲ್ಲಿ ಆಚಿ ಸ್ಪೈಸಿ ಪದಾರ್ಥಗಳ ಪ್ಯಾಕೆಟ್ ಗಳಿದ್ದವು. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಅದನ್ನು ತೆರೆದು ನೋಡಿದಾಗ ಅದರಲ್ಲಿ ಸುಮಾರು 30 ಲಕ್ಷ ರೂ ಮೌಲ್ಯದ  3 ಕೆಜಿ 'ಸ್ಯೂಡೋಫೆಡ್ರಿನ್' ಮಾದಕ ದ್ರವ್ಯ ಪತ್ತೆಯಾಗಿತ್ತು.

ಕೂಡಲೇ ಅಧಿಕಾರಿಗಳನ್ನು ಎಲ್ಲ ನಾಲ್ವರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಅಧಿಕಾರಿಗಳು ಬಂಧಿತರಿಂದ ಮಾಹಿತಿ ಪಡೆದಿದ್ದು, 'ಸ್ಯೂಡೋಫೆಡ್ರಿನ್' ಮಾದಕ ದ್ರವ್ಯವನ್ನು ಅವರು ಆಸ್ಟ್ರೇಲಿಯಾಗೆ ರವಾನೆ ಮಾಡಲು ಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು  ತನಿಖೆ ಮುಂದುವರೆಸಿದ್ದಾರೆ.

SCROLL FOR NEXT