ದೇಶ

ತಮಿಳುನಾಡು ಸಿಎಂ ಪಳನಿಸ್ವಾಮಿಗೆ ಮಾತೃವಿಯೋಗ

Shilpa D

ಸೇಲಂ: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ತಾಯಿ ಥಾವುಸಾಯಮ್ಮಾಳ್ ವಿಧಿವಶರಾಗಿದ್ದಾರೆ.

93 ವರ್ಷದ ಥಾವುಸಾಯಾಮ್ಮಾಳ್ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು, ಶುಕ್ರವಾರ ಅವರನ್ನು ಸೇಲಂ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಸೋಮವಾರ ರಾತ್ರಿ 12.30 ರ ಸುಮಾರಿಗೆ ಥಾವುಸಾಯಮ್ಮಾಳ್ ಕೊನೆಯುಸಿರೆಳೆದಿದ್ದು,  ಸೇಲಂ ಜಿಲ್ಲೆಯ ಎಡಪ್ಪಾಡಿ ಬಳಿಯ ಸ್ವಗ್ರಾಮ ಸಿಲುವಂಪಾಳ್ಯಂ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ತೂತುಕುಡಿಯಲ್ಲಿ ಆಯೋಜಿಸಿದ್ದ ಎಲ್ಲಾ ಕಾರ್ಯಕ್ರಮ ಮತ್ತು ಸಭೆಗಳನ್ನು ಸಿಎಂ ಪಳನಿಸ್ವಾಮಿ ರದ್ದುಪಡಿಸಿದ್ದಾರೆ, ಸಿಎಂ ಪಳನಿಸ್ವಾಮಿ ತಾಯಿ ಅವರ ನಿಧನಕ್ಕೆ ತಮಿಳುನಾಡಿನ ಹಲವು ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.

SCROLL FOR NEXT