ಶೋಭಾ ನಾಯ್ಡು 
ದೇಶ

ಪದ್ಮಶ್ರೀ ಪ್ರಶಸ್ತಿ ವಿಜೇತೆ ಕೂಚುಪುಡಿ ಕಲಾವಿದೆ ಶೋಭಾ ನಾಯ್ಡು ನಿಧನ

ಖ್ಯಾತ ಕೂಚುಪುಡಿ ನೃತ್ಯ  ಕಲಾವಿದೆ  ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶೋಭಾ ನಾಯ್ಡು ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ನಿಧನರಾದರು, ಅಲ್ಲಿ ಅವರು ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. 

ಹೈದರಾಬಾದ್: ಖ್ಯಾತ ಕೂಚುಪುಡಿ ನೃತ್ಯ  ಕಲಾವಿದೆ  ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶೋಭಾ ನಾಯ್ಡು ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ನಿಧನರಾದರು, ಅಲ್ಲಿ ಅವರು ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. 

1956 ರಲ್ಲಿ ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿ ಜನಿಸಿದ್ದ ಶೋಭಾ ನಾಯ್ಡು ಕೂಚುಪುಡಿ ನೃತ್ಯದ ತರಬೇತಿಯನ್ನು ವೇಂಪತಿ ಚಿನ್ನ ಸತ್ಯಂ ಅವರಿಂದ ಪಡೆದರು.

ಶೋಭಾ ಅವರಿಗೆ 1991 ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ,  2001 ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ  ಗೌರವ   ಮದ್ರಾಸ್‌ನ ಶ್ರೀ ಕೃಷ್ಣ ಗಣ ಸಭೆಯಿಂದ 'ನೃತ್ಯ ಚೂಡಾಮಣಿ ' ಪ್ರಶಸ್ತಿ ಸಂದಿದೆ.  ಅವರು ಹೈದರಾಬಾದ್‌ನ 40 ವರ್ಷಪರಂಪರೆ ಇರುವ ಕೂಚುಪುಡಿ  ಆರ್ಟ್ ಅಕಾಡೆಮಿಗೆ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು.  ಭಾರತ ಮತ್ತು ವಿದೇಶಗಳ  1,500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

ಶೋಭಾ ನಾಯ್ಡು ಕಿರು ಪರಿಚಯ

ಶೋಭಾ ನಾಯ್ಡು ಭಾರತದ ಅಗ್ರಗಣ್ಯ ಕೂಚುಪುಡಿ ನೃತ್ಯ ಕಲಾವಿದೆಯರಲ್ಲಿ ಒಬ್ಬರು. ಪ್ರಖ್ಯಾತ ವೇಂಪತಿ ಚಿನ್ನ ಸತ್ಯಂ ಅವರ ಅತ್ಯುತ್ತಮ ಶಿಷ್ಯರಲ್ಲಿ ಒಬ್ಬರಾಗಿದ್ದಾರೆ. ಅವರು ಕೂಚುಪುಡಿ  ತಂತ್ರವನ್ನು ಕರಗತ ಮಾಡಿಕೊಂಡಿದ್ದ  ಚಿಕ್ಕ ವಯಸ್ಸಿನಲ್ಲಿಯೇ ನೃತ್ಯ-ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದ ಕಲಾವಿದೆ. ದೇಶಾದ್ಯಂತ ಮತ್ತು ವಿದೇಶಗಳಲ್ಲಿ ತಮ್ಮ ತಂಡದೊಂದಿಗೆ  ಪ್ರದರ್ಶನ ನೀಡಿದ್ದ ಶೋಭಾ ನಾಯ್ಡು ಸತ್ಯಭಾಮ ಮತ್ತು ಪದ್ಮಾವತಿ ಪಾತ್ರಗಳಲ್ಲಿ ಉತ್ತಮ ಅಭಿನಯ ನೀಡಿದ್ದರು. ಅತ್ಯುತ್ತಮ ಏಕವ್ಯಕ್ತಿ ನರ್ತಕಿ ಕೂಡ ಆಗಿದ್ದ ಶೋಭಾ ನಾಯ್ಡು  ಹಲವಾರು ನೃತ್ಯ-ನಾಟಕಗಳನ್ನು, ನೃತ್ಯ ಸಂಯೋಜನೆಯನ್ನೂ ಮಾಡಿದ್ದಾರೆ. 

ಶೋಭಾ ನಾಯ್ಡು 1956 ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅನಕಪಲ್ಲಿಯಲ್ಲಿ ಜನಿಸಿದ್ದರು.  ಕ್ವೀನ್ ಮೇರಿಸ್ ಕಾಲೇಜಿನಿಂದ ಪದವಿ ಗಳಿಸಿದ್ದ ಶೋಬಾ ಕೌಟುಂಬಿಕ ವಿರೋಧಗಳ ಹೊರತಾಗಿಯೂ ಅವರು ವೇಂಪತಿಯವರಲ್ಲಿ ಕೂಚುಪುಡಿ ತರಬೇತಿ ಪಡೆದಿದ್ದರು.  ಅವರು 80 ಏಕವ್ಯಕ್ತಿ ಪ್ರದರ್ಶನ ನೀಡಿದ್ದಲ್ಲದೆ  15 ಬ್ಯಾಲೆಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ 

ಯು.ಕೆ, ಯು.ಎಸ್.ಎಸ್.ಆರ್, ಸಿರಿಯಾ, ಟರ್ಕಿ, ಹಾಂಗ್ ಕಾಂಗ್, ಬಾಗ್ದಾದ್, ಕಂಪುಚಿಯಾ, ಮತ್ತು ಬ್ಯಾಂಕಾಕ್ ನಂತಹ ವಿವಿಧ ರಾಷ್ಟ್ರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದರು. ಭಾರತೀಯ ಸರ್ಕಾರದ ಪರವಾಗಿ, ನಾಯ್ಡು ವೆಸ್ಟ್ ಇಂಡೀಸ್, ಮೆಕ್ಸಿಕೊ, ವೆನೆಜುವೆಲಾ, ಟುನಿಸ್, ಕ್ಯೂಬಾಗೆ ಸಾಂಸ್ಕೃತಿಕ ನಿಯೋಗವನ್ನು ಮುನ್ನಡೆಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಷ್ಯಾ ಅಧ್ಯಕ್ಷ Putin ಗೆ ಮೋದಿ ನಿವಾಸದಲ್ಲಿ ವಿಶೇಷ ಭೋಜನ ಕೂಟ!

ಇನ್ನೂ 2-3 ದಿನ ಅವಾಂತರ; ಫೆ. 10 ರವರೆಗೆ ನಿಯಮಗಳ ವಿನಾಯಿತಿ ಕೋರಿದ IndiGo!

ಭಾರತಕ್ಕೆ ಬಂದ ಆಪ್ತ ಗೆಳೆಯ Putin ಗೆ ಭಗವದ್ಗೀತೆ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ! ವಿಶೇಷ ಏನು?

ನನ್ನ ಸ್ನೇಹಿತ ಪುಟಿನ್‌ರನ್ನು ಸ್ವಾಗತಿಸಲು ತುಂಬಾ ಸಂತೋಷವಾಗುತ್ತಿದೆ: ಪ್ರಧಾನಿ ಮೋದಿ

IndiGo: ಮತ್ತೆ 550 ವಿಮಾನ ರದ್ದು; ಸಂಸ್ಥೆಯ 20 ವರ್ಷದ ಇತಿಹಾಸದಲ್ಲಿ ಇದೇ ಮೊದಲು!

SCROLL FOR NEXT