ಸಂಗ್ರಹ ಚಿತ್ರ 
ದೇಶ

ಬಿಹಾರ ಚುನಾವಣೆ: ಚುನಾವಣಾ ಸಮೀಕ್ಷೆ ಬ್ಯಾನ್; ಜ್ಯೋತಿಷಿ, ವಿಶ್ಲೇಷಕರ ಮುನ್ಸೂಚನೆಯೂ ಪ್ರಸಾರ ಮಾಡುವಂತಿಲ್ಲ!

ಚುನಾವಣಾ ಸಮೀಕ್ಷೆಗಳ ನಿಷೇಧವಿರುವಾಗ ಜ್ಯೋತಿಷಿ, ವಿಶ್ಲೇಷಕರ ಮುನ್ಸೂಚನೆಯನ್ನೂ ಕೂಡ ಪ್ರಸಾರ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಗುರುವಾರ ಸ್ಪಷ್ಟಪಡಿಸಿದೆ.

ನವದೆಹಲಿ: ಚುನಾವಣಾ ಸಮೀಕ್ಷೆಗಳ ನಿಷೇಧವಿರುವಾಗ ಜ್ಯೋತಿಷಿ, ವಿಶ್ಲೇಷಕರ ಮುನ್ಸೂಚನೆಯನ್ನೂ ಕೂಡ ಪ್ರಸಾರ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಗುರುವಾರ ಸ್ಪಷ್ಟಪಡಿಸಿದೆ.

ಈ ಕುರಿತಂತೆ ನಿಬಂಧನೆಗಳನ್ನು ಹೊರಡಿಸಿರುವ ಚುನಾವಣಾ ಆಯೋಗ, 'ಚುನಾವಣೆ ಸಮೀಕ್ಷೆಗಳ ಮೇಲೆ ನಿರ್ಬಂಧವಿರುವಾಗ ಮಾಧ್ಯಮಗಳಲ್ಲಿ ಜ್ಯೋತಿಷಿಗಳು, ಸಂಖ್ಯಾಶಾಸ್ತ್ರಜ್ಞರು, ವಿಶ್ಲೇಷಕರ ಮೂಲಕ ಸೋಲು ಗೆಲುವಿನ ಮುನ್ಸೂಚನೆಯನ್ನು ಕೂಡ ಪ್ರಸಾರ ಮಾಡುವುದೂ ನಿಯಮಬಾಹಿರ ಎಂದು ಚುನಾವಣಾ  ಆಯೋಗ ಗುರುವಾರ ಸ್ಪಷ್ಟಪಡಿಸಿದೆ. 2020ರ ಅಕ್ಟೋಬರ್ 28 ರಂದು (ಬುಧವಾರ) ಬೆಳಿಗ್ಗೆ 7 ಮತ್ತು ನವೆಂಬರ್ 7 ರಂದು ಸಂಜೆ 6.30ರ ನಡುವಿನ ನಿಷೇಧಿತ ಅವಧಿಯಲ್ಲಿ ಫಲಿತಾಂಶಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ ಅಥವಾ ಲೇಖನವನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ  (ಎಲೆಕ್ಟ್ರಾನಿಕ್–ಮುದ್ರಣ ) ಚುನಾವಣಾ ಆಯೋಗ ಸೂಚಿಸಲಾಗಿದೆ

ಬಿಹಾರ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಇದೇ 28ರಿಂದ ಆರಂಭವಾಗಲಿದೆ. ಅದಕ್ಕೂ ಮೊದಲು ಗುರುವಾರ ಚುನಾವಣೆ ಆಯೋಗ ಸಲಹೆ ಸೂಚನೆಗಳನ್ನು ಮತ್ತೊಮ್ಮೆ ಬಿಡುಗಡೆ ಮಾಡಿದೆ. ಎಲೆಕ್ಟ್ರಾನಿಕ್ ಮತ್ತು ಮುದ್ರಣಗಳು ಮುಕ್ತ, ನ್ಯಾಯಸಮ್ಮತ ಚುನಾವಣೆಗಾಗಿ ಇಂಥಹ ಕಾರ್ಯಕ್ರಮನ್ನು  ಪ್ರಸಾರ ಮಾಡುವುದನ್ನು ತಡೆಯಬೇಕು, ಯಾವುದೇ ವ್ಯಕ್ತಿ ಯಾವುದೇ ಮಾದರಿಯಲ್ಲಿ ಮತಗಟ್ಟೆ ಸಮೀಕ್ಷೆ ನಡೆಸಬಾರದು. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಅದನ್ನು ಪ್ರಕಟಿಸಲು ಅಥವಾ ಪ್ರಚಾರ ಮಾಡಲು ಪ್ರಯತ್ನಿಸಬಾರದು ಎಂದು ಆಯೋಗ ತಿಳಿಸಿದೆ.

2017ರ ಮಾರ್ಚ್‌ 30ರಂದು ಮೊದಲ ಬಾರಿಗೆ ಸಮೀಕ್ಷೆಗಳ ಕುರಿತು ಸಲಹೆ ಸೂಚನೆಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಜನ ಪ್ರಾತಿನಿಧಿ ಕಾಯ್ದೆಯ ಸೆಕ್ಷನ್ 126ಎ ಅನ್ನು ಉಲ್ಲೇಖಿಸಿ ಸಲಹೆ ಸೂಚನೆಗಳನ್ನು ನೀಡಿತ್ತು.

ಬಿಹಾರ ಚುನಾವಣೆಯು ಮೂರು ಹಂತಗಳಲ್ಲಿ ನಡೆಯಲಿದೆ. ಅ. 28ರಂದು ಮೊದಲ ಹಂತ, ನ.3 ರಂದು ಎರಡನೇ ಹಂತ, ನ.7ರಂದು ಮೂರನೇ ಹಂತದ ಮತದಾನ ನಡೆಯಲಿದ್ದು, ನ. 10ರಂದು ಫಲಿತಾಂಶ ಪ್ರಕಟವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT