ದೇಶ

ಭಾರತ-ಚೀನಾ ಗೌಪ್ಯ ಮಾತುಕತೆಯಲ್ಲಿ ನಿರತ? ವಿದೇಶಾಂಗ ಸಚಿವ ಜೈಶಂಕರ್ ಏನಂತಾರೆ?

Sumana Upadhyaya

ನವದೆಹಲಿ: ಪೂರ್ವ ಲಡಾಕ್ ನಲ್ಲಿ ಎರಡು ದೇಶಗಳ ಸೇನೆ ನಿಯೋಜನೆಯಿಂದ ಉಂಟಾಗಿರುವ ಸಮಸ್ಯೆ, ಆತಂಕದ ವಾತಾವರಣವನ್ನು ನಿವಾರಿಸಲು ಗೌಪ್ಯ ಮಾತುಕತೆಯಲ್ಲಿ ನಿರತವಾಗಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.

ಮಾತುಕತೆ ಮುಂದುವರಿದಿದೆ. ಸೇನೆ ಹಿಂಪಡೆಯುವ ಕೆಲಸ ಪ್ರಗತಿಯಲ್ಲಿದೆ. ಈಗ ನಡೆಯುತ್ತಿರುವ ಮಾತುಕತೆ, ಬೆಳವಣಿಗೆಗಳು ಗೌಪ್ಯವಾಗಿದೆ. ಇದನ್ನು ಸಾರ್ವಜನಿಕವಾಗಿ ಈಗ ನಾನು ಹೇಳುವ ಸ್ಥಿತಿಯಲ್ಲಿಲ್ಲ. ಈ ಬಗ್ಗೆ ಮೊದಲೇ ತೀರ್ಮಾನ ತೆಗೆದುಕೊಳ್ಳಲು ನಾನು ಸಿದ್ದವಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.

ಅವರು ನಿನ್ನೆ ದೆಹಲಿಯಲ್ಲಿ ಬ್ಲೂಮ್ ಬರ್ಗ್ ಇಂಡಿಯಾ ಎಕನಾಮಿಕ್ ವೇದಿಕೆಯನ್ನುದ್ದೇಶಿಸಿ ಮಾತನಾಡಿ, ಗಡಿ ವಾಸ್ತವ ರೇಖೆಯಲ್ಲಿ ಸೇನೆಯನ್ನು ನಿಯೋಜಿಸುವ ಕೆಲಸ ಖಂಡಿತಾ ಮುಂದುವರಿದಿದೆ.ಇಲ್ಲಿ ಎರಡೂ ದೇಶಗಳು ಸಮಾನತೆಯನ್ನು ಕಂಡುಕೊಳ್ಳಬಹುದೇ, ಗಡಿಯಲ್ಲಿ ನಮ್ಮ ಮುಂದಿರುವ ಸವಾಲು ಅದೇ ಆಗಿದೆ ಎಂದರು.

ಗಡಿಭಾಗದಲ್ಲಿ ಶಾಂತಿ ನೆಲೆಸಲು 1993ರಲ್ಲಿ ಮಾಡಿಕೊಂಡ ಒಪ್ಪಂದ ನಂತರ ಎರಡೂ ದೇಶಗಳ ಮಧ್ಯೆ ಸಾಕಷ್ಟು ಸಂಬಂಧ ಸುಧಾರಣೆಯಾಗಿದೆ. ಶಾಂತಿ ಮತ್ತು ಸೌಹಾರ್ದತೆ ಇಲ್ಲದಿದ್ದಾಗ ಮಾಡಿರುವ ಒಪ್ಪಂದವನ್ನು ಮುರಿದಾಗ ಅಲ್ಲಿ ಸಮಸ್ಯೆಯುಂಟಾಗುತ್ತದೆ ಎಂದರು.

SCROLL FOR NEXT