ದೇಶ

ಆಹಾರ ಮತ್ತು ಕೃಷಿ ಸಂಸ್ಥೆಯ ವಜ್ರ ಮಹೋತ್ಸವ: 75 ರೂ. ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

Sumana Upadhyaya

ನವದೆಹಲಿ: ಆಹಾರ ಮತ್ತು ಕೃಷಿ ಸಂಸ್ಥೆ(ಎಫ್ಎಒ)ಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ 75ರ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದರು.

ಇಂದು ವಿಶ್ವ ಆಹಾರ ದಿನ, ಈ ನಿಟ್ಟಿನಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ ಕಾರ್ಯಕ್ರಮ ಏರ್ಪಡಿಸಿತ್ತು. ಪ್ರಧಾನ ಮಂತ್ರಿ ಇದೇ ಸಂದರ್ಭದಲ್ಲಿ ದೇಶಕ್ಕೆ ಇತ್ತೀಚೆಗೆ ಅಭಿವೃದ್ಧಿಪಡಿಸಿದ ಜೈವಿಕ ವೈವಿಧ್ಯದ 8 ಪ್ರಬೇಧಗಳನ್ನು ಸಮರ್ಪಿಸಿದರು. ಕೃಷಿ ಮತ್ತು ಪೋಷಣೆಗೆ ಸರ್ಕಾರವು ನೀಡಿದ ಹೆಚ್ಚಿನ ಆದ್ಯತೆಯನ್ನು ಇದು ಸೂಚಿಸುತ್ತದೆ. ಹಸಿವು, ಅಪೌಷ್ಟಿಕತೆ ಮತ್ತು ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಸಂಕಲ್ಪದ ಸಾಕ್ಷಿ ಇಂದಿನ ಕಾರ್ಯಕ್ರಮವಾಗಿದೆ.

ಆಹಾರ ಮತ್ತು ಕೃಷಿ ಸಂಸ್ಥೆಯ ಪಯಣ ಸಮಾಜದ ಕೆಳಸ್ತರದವರು ಸಹ ಆರ್ಥಿಕವಾಗಿ ಬಲಿಷ್ಠವಾಗಬೇಕು, ಪೌಷ್ಟಿಕಯುಕ್ತ ಆಹಾರ ಸೇವಿಸಬೇಕು, ಹಸಿವಿನಿಂದ ಯಾರೂ ಬಳಲಬಾರದು ಎಂಬುದಾಗಿದೆ.

ಭಾರತೀಯ ನಾಗರಿಕ ಸೇವಾ ಅಧಿಕಾರಿ ಡಾ ಬಿನಯ್ ರಂಜನ್ ಸೇನ್ 1956-57ರಲ್ಲಿ ಎಫ್ಎಒದ ಮಹಾ ನಿರ್ದೇಶಕರಾಗಿದ್ದರು. ಪ್ರಸಕ್ತ ವರ್ಷ ನೊಬೆಲ್ ಶಾಂತಿ ಪುರಸ್ಕಾರ ಪಡೆದ ವಿಶ್ವ ಆಹಾರ ಕಾರ್ಯಕ್ರಮವನ್ನು ಅವರ ಸಮಯದಲ್ಲಿಯೇ ಆರಂಭಿಸಲಾಯಿತು. 2016ರಲ್ಲಿ ಅಂತಾರಾಷ್ಟ್ರೀಯ ಧಾನ್ಯಗಳ ವರ್ಷ ಮತ್ತು 2023ರಲ್ಲಿ ಅಂತಾರಾಷ್ಟ್ರೀಯ ನವಣೆ ವರ್ಷ ಎಂದು ಆಚರಿಸಬೇಕೆಂದು ಭಾರತ ಮಾಡಿರುವ ಪ್ರಸ್ತಾವನೆ ಹಿಂದೆ ಎಫ್ಎಒದ ಪಾತ್ರ ಸಾಕಷ್ಟಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

SCROLL FOR NEXT