ದೇಶ

24 ಗಂಟೆಯಲ್ಲಿ 17 ಸೆಂ.ಮೀ ಮಳೆ!: ಮುತ್ತಿನ ನಗರಿ ಹೈದರಾಬಾದ್ ಮೇಲೆ ಮತ್ತೆ ಮುನಿಸಿಕೊಂಡ ವರುಣ

Sumana Upadhyaya

ಹೈದರಾಬಾದ್: ಕೇವಲ ಮೂರು ದಿನಗಳ ಹಿಂದೆ ಸುರಿದ ಸತತ ಮಳೆಯಿಂದ ಭಾರೀ ಪ್ರವಾಹಕ್ಕೊಳಗಾಗಿ ಅಪಾರ ಆಸ್ತಿ-ಪಾಸ್ತಿ, ಪ್ರಾಣಹಾನಿ ಅನುಭವಿಸಿದ್ದ ಮುತ್ತಿನ ನಗರಿ ಹೈದರಾಬಾದ್ ಜನತೆ ನಿನ್ನೆ ಮತ್ತೆ ಭಯಾನಕ ಮಳೆಯನ್ನು ಕಾಣುವ ಪರಿಸ್ಥಿತಿಯುಂಟಾಯಿತು.

ತೆಲಂಗಾಣ ರಾಜಧಾನಿ ಹೈದರಾಬಾದ್ ನ ಹಲವು ಪ್ರದೇಶಗಳಲ್ಲಿ 17 ಸೆಂಟಿ ಮೀಟರ್ ಗೂ ಹೆಚ್ಚಿಗೆ ಮಳೆಯಾಗಿದ್ದು ಹವಾಮಾನ ಪರಿಸ್ಥಿತಿ ಅಸಹಜವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನಿನ್ನೆ ಹೈದರಾಬಾದ್ ಹೊರವಲಯ ಘಟ್ಕೇಸರ ಮತ್ತು ಸರೂರ್ ನಗರಗಳಲ್ಲಿ ಅತಿ ಹೆಚ್ಚು 18 ಸೆಂಟಿ ಮೀಟರ್ ಮಳೆಯಾಗಿದ್ದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್(ಜಿಎಚ್ ಎಂಸಿ) ಪ್ರದೇಶಗಳಲ್ಲಿ 17 ಸೆಂಟಿ ಮೀಟರ್ ಮಳೆ ದಾಖಲಾಗಿದೆ.

ನಿನ್ನೆ ಸಾಯಂಕಾಲ 7 ಗಂಟೆ ಹೊತ್ತಿಗೆ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ಬಗ್ಗೆ 136 ದೂರುಗಳು, ಚರಂಡಿ ತುಂಬಿ ಹರಿದ ಬಗ್ಗೆ 427 ದೂರುಗಳು ಮತ್ತು ಕಟ್ಟಡ, ಗೋಡೆ ಕುಸಿದ 7 ದೂರುಗಳು ವರದಿಯಾಗಿವೆ. ವಿಪತ್ತು ನಿರ್ವಹಣಾ ಪಡೆಯ ಸಂಖ್ಯೆಗೆ ನಾಗರಿಕರು 040 29555500, ಅಥವಾ ಇತರ ನೆರವಿಗೆ 040 21111111ನ್ನು ಸಂಪರ್ಕಿಸಬಹುದು.

SCROLL FOR NEXT