ಸಂಗ್ರಹ ಚಿತ್ರ 
ದೇಶ

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ರುಂಡ ಕತ್ತರಿಸಿ ಆಕೆಯ ಪ್ರಿಯಕರನ ಮನೆ ಮುಂದೆ ಬಿಸಾಡಿ ಹೋದ ಪತಿ!

ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿಯೊಬ್ಬ ಆಕೆಯ ರುಂಡವನ್ನು ಕತ್ತರಿಸಿ ಅದನ್ನು ಪ್ರಿಯಕರನ ಮನೆ ಮುಂದೆ ತಂದಿಟ್ಟು ಹೋಗಿರುವ ಭೀಕರ ಘಟನೆ ನಡೆದಿದೆ. 

ಹೈದರಾಬಾದ್: ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿಯೊಬ್ಬ ಆಕೆಯ ರುಂಡವನ್ನು ಕತ್ತರಿಸಿ ಅದನ್ನು ಪ್ರಿಯಕರನ ಮನೆ ಮುಂದೆ ತಂದಿಟ್ಟು ಹೋಗಿರುವ ಭೀಕರ ಘಟನೆ ನಡೆದಿದೆ. 

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಅನಂತಸಾಗರ್ ಗ್ರಾಮದಲ್ಲಿ ವಾಸವಿದ್ದ ಜುರ್ರು ಸಾಹಿಲು ಎಂಬ ವ್ಯಕ್ತಿ ತನ್ನ ಪತ್ನಿ 35 ವರ್ಷದ ಅಂಶಮ್ಮ ಎಂಬಾಕೆಯ ರುಂಡವನ್ನು ಕತ್ತರಿಸಿದ್ದಾರೆ. 

ನಂತರ ಆ ರುಂಡವನ್ನು ಬೈಕ್ ನಲ್ಲಿ ಐದು ಕಿ.ಮೀ ದೂರದಲ್ಲಿರುವ ನಾರಾಯಣ್ ಖೇಡ್ ಗ್ರಾಮದಲ್ಲಿ ಅಂಶಮ್ಮ  ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯ ಮನೆಯ ಬಾಗಿಲ ಮುಂದೆ ಇಟ್ಟು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಜರ್ರು ಸಾಹಿಲುಗೆ ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನವಿತ್ತು. ಈ ಸಂಬಂಧ ಗಂಡ-ಹೆಂಡತಿಯ ನಡುವೆ ಪ್ರತಿನಿತ್ಯ ಜಗಳವಾಗುತ್ತಿತ್ತು. ಕಳೆದ ಬುಧವಾರ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ದೊಡ್ಡ ಜಗಳವಾಗಿದೆ. ನಂತರ ಕೋಪಗೊಂಡ ಜುರ್ರು ಕೊಡಲಿಯಿಂದ ಪತ್ನಿಯ ಕತ್ತನ್ನು ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

16ನೇ ದಿನಕ್ಕೆ ಯುದ್ಧ: ಮೊದಲ ಬಾರಿಗೆ 'Dancing Missile' ಉಡಾಯಿಸಿದ Iran, 2 ಸಾವಿರ ಕಿ.ಮೀ ವ್ಯಾಪ್ತಿ.. ಅಮೆರಿಕಕ್ಕೆ ತಲೆನೋವು!

ನನಗೆ ಇರೋದ್ 5 ಬೆರಳು: ಸಾವಿನ ವದಂತಿ ಮಧ್ಯೆ ಚಹಾ ಕುಡಿಯುತ್ತ ಕಾಣಿಸಿಕೊಂಡ ಇಸ್ರೇಲ್ ಪ್ರಧಾನಿ, ಇರಾನ್‌ಗೆ ಮುಖಭಂಗ, Video!

ಬಾಲಿವುಡ್ ನಟಿ ಮಧು ಮಲ್ಹೋತ್ರಾ ನಿಧನ

Reels ಗೀಳಿಗೆ ಮತ್ತೊಂದು ಬಲಿ: Delhi–Mumbai Expresswayನಲ್ಲಿ ಕ್ಯಾಂಟರ್ ಢಿಕ್ಕಿ, ಯುವಕ ಸಾವು! video

ಹಳ್ಳ ಹಿಡಿದ ಇರಾನ್ ಆರ್ಥಿಕತೆ! 1 ಲೀಟರ್ ಹಾಲಿನ ಬೆಲೆ 8 ಲಕ್ಷ, ಬ್ರೆಡ್‌ 6.6 ಲಕ್ಷ, 1 ಕೆಜಿ ಅಕ್ಕಿಗೆ 32 ಲಕ್ಷ ರಿಯಾಲ್!

SCROLL FOR NEXT