ದೇಶ

ಅಮಿತ್ ಶಾ ನಿಲುವನ್ನು ಸ್ವಾಗತಿಸಿದ ಶಿವಸೇನೆ 

Srinivas Rao BV

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಬರೆದ ಪತ್ರದ ಬಗ್ಗೆ ಅಮಿತ್ ಶಾ ನಿಲುವನ್ನು ಶಿವಸೇನೆ ಸ್ವಾಗತಿಸಿದೆ. 

ಮುಖ್ಯಮಂತ್ರಿಯೊಬ್ಬರಿಗೆ ಬರೆದ ಪತ್ರದಲ್ಲಿ ಇನ್ನೂ ಉತ್ತಮ ಪದಗಳನ್ನು ಬಳಕೆ ಮಾಡಬಹುದಿತ್ತು ಎಂದು ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟಿದ್ದರು. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಸಂಸದ ಸಂಜಯ್ ರೌತ್, ಅಮಿತ್ ಶಾ ಅವರ ನಿಲುವು ಪ್ರಕಟಗೊಂಡಿದ್ದು ಈ ವಿಷಯವನ್ನು ಶಿವಸೇನೆ ಇಲ್ಲಿಗೇ ಬಿಡಲಿದೆ ಎಂದು ಸಂಜಯ್ ರೌತ್ ಹೇಳಿದ್ದಾರೆ. 

ಧಾರ್ಮಿಕ ಕೇಂದ್ರಗಳನ್ನು ಪುನಃ ತೆರೆಯುವುದಕ್ಕೆ ಸಂಬಂಧಿಸಿದಂತೆ ಸಿಎಂ ಉದ್ಧವ್ ಠಾಕ್ರೆ-ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡುವೆ ಪತ್ರದ ಮೂಲಕ ಜಟಾಪಟಿ ನಡೆದಿತ್ತು. ಉಭಯ ನಾಯಕರೂ ಪತ್ರದಲ್ಲಿ ಜಾತ್ಯಾತೀತತೆ ಕುರಿತು ವಾಗ್ವಾದ ನಡೆಸಿದ್ದರು.

ಸುದ್ದಿ ವಾಹಿನಿಯೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಮಿತ್ ಶಾ, ರಾಜ್ಯಪಾಲ ಕೋಶ್ಯಾರಿ ಅವರು ಮತ್ತಷ್ಟು ಉತ್ತಮ ಪದಗಳನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು ಎಂದು ಹೇಳಿದ್ದರು. ಅಮಿತ್ ಶಾ ದೇಶದ ಗೃಹ ಸಚಿವರಾಗಿದ್ದಾರೆ ಹಾಗೂ ಜವಾಬ್ದಾರಿ, ಎಚ್ಚರಿಕೆಯಿಂದ ಮಾತನಾಡುತ್ತಾರೆ ಎಂದು ಶಿವಸೇನೆ ಹೇಳಿದೆ.

SCROLL FOR NEXT