ದೇಶ

ಆಂಧ್ರ ಪ್ರದೇಶ ಟಿಡಿಪಿ ಅಧ್ಯಕ್ಷರಾಗಿ ಕಿಂಜರಾಪು ಅಚನ್ನಾಯ್ಡು ನೇಮಕ ಮಾಡಿದ ಚಂದ್ರಬಾಬು ನಾಯ್ಡು

Lingaraj Badiger

ವಿಜಯವಾಡ: ಮಾಜಿ ಸಚಿವ ಮತ್ತು ಪಕ್ಷದ ಹಿರಿಯ ನಾಯಕ ಕಿಂಜರಾಪು ಅಚನ್ನಾಯ್ಡು ಅವರು ಆಂಧ್ರಪ್ರ ದೇಶದ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಹೊಸ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಸೋಮವಾರ ಅಚನ್ನಾಯ್ಡು ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಎಲ್ ರಮಣ ಅವರನ್ನು ತೆಲಂಗಾಣದ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಉಳಿಸಿಕೊಳ್ಳಲಾಗಿದೆ. ನಾರಾ ಲೋಕೇಶ್ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರೆದಿದ್ದಾರೆ.

ಇದೇ ವೇಳೆ ಟಿಡಿಪಿಯ 27 ಸದಸ್ಯರ ಕೇಂದ್ರ ಸಮಿತಿ ಮತ್ತು 25 ಸದಸ್ಯರ ಪೊಲಿಟ್‌ಬ್ಯುರೊವನ್ನು ಪ್ರಕಟಿಸಿರುವ ನಾಯ್ಡು ಅವರು, ಕೇಂದ್ರ ಸಮಿತಿಯಲ್ಲಿ ಹಿರಿಯ ನಾಯಕರಾದ ಕಾವಲಿ ಪ್ರತಿಭಾ ಭಾರತಿ, ಗಲ್ಲಾ ಅರುಣಾ ಕುಮಾರ್, ಡಿಕೆ ಸತ್ಯಪ್ರಭಾ ಮತ್ತು ಕೋಟ್ಲಾ ಸೂರ್ಯಪ್ರಕಾಶ್ ರೆಡ್ಡಿ ಸೇರಿದಂತೆ ಆರು ಉಪಾಧ್ಯಕ್ಷರಿದ್ದಾರೆ.

ನಾರಾ ಲೋಕೇಶ್ ಅವರೊಂದಿಗೆ ಕೆ.ರಾಮೋಹನ್ ನಾಯ್ಡು, ನಿಮ್ಮಲಾ ರಮನೈದು ಮತ್ತು ಬೀಡಾ ರವಿಚಂದ್ರ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ.

SCROLL FOR NEXT