ದೇಶ

ಚಿರಾಗ್ ಪಾಸ್ವಾನ್ ಬಗ್ಗೆ ನಿತೀಶ್ ವರ್ತನೆ ಸರಿ ಇಲ್ಲ: ತೇಜಸ್ವಿ ಯಾದವ್

Lingaraj Badiger

ಪಾಟ್ನಾ: ಮಹಾಗಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಶ್ವಿ ಯಾದವ್ ಅವರು ಸೋಮವಾರ ಲೋಕ ಜನಶಕ್ತಿ ಪಕ್ಷದ (ಎಲ್ ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದು, ಚಿರಾಗ್ ಕುರಿತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ತನೆ ಸರಿ ಇಲ್ಲ ಎಂದಿದ್ದಾರೆ.

"ಚಿರಾಗ್ ಪಾಸ್ವಾನ್ ಅವರಿಗೆ ನಿತೀಶ್ ಕುಮಾರ್ ಮಾಡಿದ್ದು ಸರಿಯಲ್ಲ. ಚಿರಾಗ್ ಪಾಸ್ವಾನ್ ಅವರಿಗೆ ಹಿಂದೆಂದಿಗಿಂತಲೂ ಇಂದು ಅವರ ತಂದೆ ಬೇಕು. ಆದರೆ ರಾಮ್ ವಿಲಾಸ್ ಪಾಸ್ವಾನ್ ನಮ್ಮ ನಡುವೆ ಇಲ್ಲ ಮತ್ತು ನಾವು ಅದರ ಬಗ್ಗೆ ದುಃಖಿತರಾಗಿದ್ದೇವೆ. ಈ ಸಂದರ್ಭದಲ್ಲಿ ನಿತೀಶ್ ಕುಮಾರ್ ಅವರು ಚಿರಾಗ್ ಪಾಸ್ವಾನ್ ಅವರಿಗೆ ಅನ್ಯಾಯ ಮಾಡಿದ್ದಾರೆ. ಅವರ ನಡವಳಿಕೆ ಸರಿಯಲ್ಲ ಎಂದು" ತೇಜಶ್ವಿ ಹೇಳಿದ್ದಾರೆ.

ಕಳೆದ 15 ವರ್ಷಗಳಲ್ಲಿ ಜೆಡಿಯು ಸರ್ಕಾರ ಮಾಡಿದ ಯಾವುದೇ ಸಾಧನೆ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಯಾದವ್ ಕುಡಿ ನಿತೀಶ್ ಕುಮಾರ್ ಅವರಿಗೆ ಸವಾಲು ಹಾಕಿದೆ.

"ನಿತೀಶ್ ಕುಮಾರ್ ಅವರ ಯಾವುದೇ ಸಾಧನೆಗಳ ಬಗ್ಗೆ ಚರ್ಚಿಸಲು ನಾನು ಸಿದ್ಧವಾಗಿದ್ದೇನೆ. ಅವರ ಸಾಧನೆಯ ಬಗ್ಗೆ ನಾವು ಚರ್ಚಿಸಬೇಕು. ಈ ಮೂಲಕ ಹೊಸ ಚರ್ಚಾ ಪ್ರವೃತ್ತಿಯನ್ನು ಪ್ರಾರಂಭಿಸಬೇಕು. ಮುಖ್ಯಮಂತ್ರಿ ಅಭ್ಯರ್ಥಿಗಳ ನಡುವೆ ಚರ್ಚೆ ಇರಬೇಕು. ನಿತೀಶ್ ಜಿ ನನ್ನ ಸವಾಲನ್ನು ಸ್ವೀಕರಿಸಬೇಕು" ಎಂದು ತೇಜಸ್ವಿ ಹೇಳಿದ್ದಾರೆ.

SCROLL FOR NEXT