ಇರ್ಮತಿ ದೇವಿ-ಸೋನಿಯಾ-ಪ್ರಿಯಾಂಕಾ 
ದೇಶ

ತಮ್ಮ ಮಗಳನ್ನು 'ಐಟಂ' ಎಂದು ಕರೆದರೆ ಸೋನಿಯಾ ಗಾಂಧಿ ಸುಮ್ಮನಿರುತ್ತಾರಾ? ಇರ್ಮತಿ ದೇವಿ ನೋವಿನ ಮಾತು!

ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ಒಬ್ಬ ತಾಯಿ. ನಿಮಗೂ ಒಬ್ಬಳು ಮಗಳಿದ್ದಾಳೆ. ನಿಮ್ಮ ಮಗಳಿಗೆ ಯಾರಾದರೂ ಐಟಂ ಎಂದು ಕರೆದರೆ ನೀವು ಸುಮ್ಮನಿರುತ್ತಿರಾ ಎಂದು ಮಧ್ಯಪ್ರದೇಶ ಸಚಿವೆ ಇರ್ಮತಿ ದೇವಿ ನೋವಿನ ಮಾತುಗಳನ್ನಾಡಿದ್ದಾರೆ.

ಭೋಪಾಲ್: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ಒಬ್ಬ ತಾಯಿ. ನಿಮಗೂ ಒಬ್ಬಳು ಮಗಳಿದ್ದಾಳೆ. ನಿಮ್ಮ ಮಗಳಿಗೆ ಯಾರಾದರೂ ಐಟಂ ಎಂದು ಕರೆದರೆ ನೀವು ಸುಮ್ಮನಿರುತ್ತಿರಾ ಎಂದು ಮಧ್ಯಪ್ರದೇಶ ಸಚಿವೆ ಇರ್ಮತಿ ದೇವಿ ನೋವಿನ ಮಾತುಗಳನ್ನಾಡಿದ್ದಾರೆ. 

ಬಿಜೆಪಿಗೆ ಸೇರ್ಪಡೆಯಾಗಿರುವ ಮಧ್ಯಪ್ರದೇಶ ಸಚಿವೆ ಇರ್ಮತಿ ದೇವಿ ಅವರನ್ನು ಮಾಜಿ ಸಿಎಂ ಕಮಲ್ ನಾಥ್ ಅವರು ಐಟಂ ಎಂದು ಕರೆಯುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 

ನಾನು ಬಡ ಕುಟುಂಬದಿಂದ ಬಂದ ಹೆಣ್ಣುಮಗಳಾಗಿದ್ದು ನನ್ನ ವಿರುದ್ಧ ಕೆಟ್ಟ ಶಬ್ಧ ಬಳಕೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕಮಲ್ ನಾಥ್ ಅವರನ್ನು ಕಾಂಗ್ರೆಸ್ ಪಕ್ಷದಿಂದಲೇ ತೆಗೆದುಹಾಕಬೇಕು ಎಂದು ಸೋನಿಯಾ ಗಾಂಧಿ ಅವರನ್ನು ಆಗ್ರಹಿಸಿದ್ದಾರೆ.

ಕಮಲ್ ನಾಥ್ ಅವರು ಡಾಬ್ರಾ ಕ್ಷೇತ್ರದ ಉಪಚುನಾವಣೆ ಅಂಗವಾಗಿ ನಡೆದ ಪ್ರಚಾರದ ವೇಳೆ ಇರ್ಮತಿ ದೇವಿಯನ್ನು ಐಟಂ ಎಂದು ಕರೆದಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

60 ದಿನಗಳ ಕದನ ವಿರಾಮ ವಿಸ್ತರಣೆಗೆ ಅಮೆರಿಕ, ಇರಾನ್ ಸಂಧಾನಕಾರರು ಒಪ್ಪಿಗೆ; ಟ್ರಂಪ್ ಅನುಮೋದನೆ ಬಾಕಿ

ಕರ್ನಾಟಕ ನಾಯಕತ್ವ ಬದಲಾವಣೆಯ ನಡುವೆ CM ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!

Karnataka CM News LIVE Updates | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ; ಸಿಎಲ್‌ಪಿ ಸಭೆ ಶನಿವಾರ ಸಾಧ್ಯತೆ!

SCROLL FOR NEXT