ದೇಶ

ಕೊರೋನಾ ಹೆಚ್ಚಳದ ಮಧ್ಯೆ ಕೇಂದ್ರ, ಕೇರಳ ಸರ್ಕಾರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ: ರಾಹುಲ್ 

Lingaraj Badiger

ವಯನಾಡ್: ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಕೇಂದ್ರ ಮತ್ತು ಕೇರಳದ ಪಿಣರಾಯಿ ವಿಜಯನ್ ಸರ್ಕಾರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

ಇಂದು ತಮ್ಮ ಸ್ವಕ್ಷೇತ್ರ ಕೇರಳದ ವಯನಾಡ್ ಗೆ ಭೇಟಿ ನೀಡಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮಾನಿಟರಿಂಗ್ ಸಮಿತಿ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ವಯನಾಡ್ ಜಿಲ್ಲಾಡಳಿತ ಕೈಗೊಂಡ ಕೋವಿಡ್ -19 ನಿಯಂತ್ರಣ ಕ್ರಮಗಳ ಬಗ್ಗೆ ತಮಗೆ ತೃಪ್ತಿ ಇದೆ ಎಂದರು.

"ನಾನು ಈಗ ವಯನಾಡ್ ಜಿಲ್ಲೆಯ ಕೋವಿಡ್ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದೇನೆ ಮತ್ತು ಕಣ್ಗಾವಲು ಯೋಜನೆಗಳಿಂದ ನಾನು ತೃಪ್ತನಾಗಿದ್ದೇನೆ" ಎಂದು ವಯನಾಡ್ ಸಂಸದ ಹೇಳಿದರು. 

ನಂತರ ಟ್ವೀಟ್ ಮಾಡಿದ ರಾಹುಲ್ ಗಾಂಧಿ, "ಕೋವಿಡ್ ವೇಗವಾಗಿ ಹರಡುತ್ತಿರುವಾಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆರೋಪ- ಪ್ರತ್ಯಾರೋಪದಲ್ಲಿ ತೊಡಗಿವೆ. ಇದು ಸಮಸ್ಯೆಯಾಗಿದ್ದು, ಆರೋಪ-ಪ್ರತ್ಯಾರೋಪ ನಿಲ್ಲಿಸಿ, ಎಲ್ಲರೂ ಕೋವಿಡ್ ನಿಯಂತ್ರಿಸುವತ್ತ ಗಮನ ಹರಿಸಬೇಕು" ಎಂದಿದ್ದಾರೆ.

SCROLL FOR NEXT