ದೇಶ

ಆರ್‌ಎಸ್‌ಎಸ್ ವಿಜಯದಶಮಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಇಲ್ಲ, 50 ಸ್ವಯಂ ಸೇವಕರಿಗಷ್ಟೇ ಅವಕಾಶ

Raghavendra Adiga

ನಾಗ್ಪುರ: ಸಧ್ಯ ಎಲ್ಲೆಲ್ಲೂ ವ್ಯಾಪಿಸಿರುವ ಕೊರೋನಾ ಸೋಂಕಿನ ಕಾರಣ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ತನ್ನ ವಾರ್ಷಿಕ ವಿಜಯದಶಮಿ ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸುನಿಸುವ ನಿರ್ಧಾರವನ್ನು ಕೈಬಿಟ್ಟಿದೆ.

ಈ ವರ್ಷ ಹಬ್ಬದ ಸಂದರ್ಭ ಆರ್‌ಎಸ್‌ಎಸ್ ಸರಸಂಗ ಚಾಲಕ ಮೋಹನ್ ಭಾಗವತ್ ಮಾತ್ರವೇ ಭಾಗವಹಿಸಿ ಭಾಷಣ ಮಾಡಲಿದ್ದಾರೆ ಹೊರತು ಬೇರಾವ ಮುಖ್ಯ ಅತಿಥಿಗಳಿರುವುದಿಲ್ಲ ಎಂದು ಸಂಘ ತೀರ್ಮಾನಿಸಿದೆ.

ಆರ್‌ಎಸ್‌ಎಸ್ ಮುಖ್ಯಸ್ಥರ ವಿಜಯದಶಮಿ ಬಾಷಣವನ್ನು ಸಂಸ್ಥೆ ಒಂದು ಪ್ರಮುಖ ಕಾರ್ಯಕ್ರಮವಾಗಿ ಪರಿಗಣಿಸಲಾಗಿದೆ ಏಕೆಂದರೆ ಅವರ ಭಾಷಣದ ಸಮಯದಲ್ಲಿ ಭವಿಷ್ಯದ ಯೋಜನೆಗಳು ಮತ್ತು ದೃಷ್ಟಿಕೋನವನ್ನು ಎಲ್ಲರಿಗೆ ತಿಳಿಸಲಾಗುತ್ತದೆ. ಈ ಹಂತದಿಂದಲೇ ರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ಅನೇಕ ವಿಷಯಗಳ ಬಗ್ಗೆ ಆರ್‌ಎಸ್‌ಎಸ್ ನಿಲುವು ತಾಳುತ್ತದೆ.

ಆರ್‌ಎಸ್‌ಎಸ್‌ನ ಹಿರಿಯ ಮುಖಂಡರ ಪ್ರಕಾರ ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಬಿಳಿ ಅಂಗಿ ಮತ್ತು 'ಖಾಕಿ' ಪ್ಯಾಂಟ್‌ಗಳನ್ನು ಧರಿಸಿದ ಸ್ವಯಂ ಸೇವಕರಿಂದ ತುಂಬಿರುವ  ಮೈದಾನ ಈ ಬಾರಿ 50 ಕ್ಕಿಂತ ಹೆಚ್ಚಿನ ಜನರನ್ನು ಕಾಣುವುದಿಲ್ಲ.  

ಆರ್‌ಎಸ್‌ಎಸ್ ಮುಖ್ಯಸ್ಥರ  ಭಾಷಣವನ್ನು  ಅಕ್ಟೋಬರ್ 25 ರಂದು ಬೆಳಿಗ್ಗೆ 8 ಗಂಟೆಗೆ ನಿಗದಿಪಡಿಸಲಾಗಿದೆ.

"50 ಕ್ಕೆ ಹೆಚ್ಚು ಜನರು  ಮೈದಾನದಲ್ಲಿ ಹಾಜರಾಗಲು ನಮಗೆ ಅನುಮತಿ ದೊರೆತಿಲ್ಲ. ಪ್ರತಿ ವಿಜಯದಶಮಿಗೆ ನಾವು ಕಾಣಬಹುದಾದ ದೃಷ್ಯ ಈ ಬಾರಿ ಇರುವುದಿಲ್ಲ. ನಾವು ಕೋವಿಡ್ -19 ಆರೋಗ್ಯ ಮಾನದಂಡಗಳನ್ನು ಪಾಲಿಸುತ್ತೇವೆ. ಆರ್‌ಎಸ್‌ಎಸ್ ಮುಖ್ಯಸ್ಥರ ಭಾಷಣ ಸಾಮಾಜಿತ ಕಾಣಗಳಲ್ಲಿ ನೇರಪ್ರಸಾರ ಕಾಣುತ್ತದೆ" ಹಿರಿಯ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ನಾಗ್ಪುರದ ವಿವಿಧ ಸ್ಥಳಗಳಲ್ಲಿ ಎಲ್ಇಡಿ ಪರದೆಗಳಲ್ಲಿ ಈ ಭಾಷಣ ನೋಡಲು ಚಿಕ್ಕ ಚಿಕ್ಕ ಗುಂಪುಗಳಿಗೆ ಅನುಮತಿ ಪಡೆಯುವ ಸಂಬಂಧ ಚರ್ಚೆಗಳು ಅನ್ಡೆದಿದೆ ಎಂದು ಮತ್ತೊಬ್ಬ ಸಂಘದ ಹಿರಿಯರು ಮಾಹಿತಿ ನೀಡಿದ್ದಾರೆ. 

SCROLL FOR NEXT