ದೇಶ

ವೈರಸ್, ಯಾವ ವೈರಸ್? ಹಬ್ಬಗಳು ಬರುತ್ತಿದ್ದಂತೆಯೇ ಎಂದಿನಂತೆ ಕೆಲಸದಲ್ಲಿ ತೊಡಗಿಕೊಂಡ ಜನರು!

Nagaraja AB

ಸಿನ್ನಾರ್:  ಕೊರೋನಾವೈರಸ್ ಪ್ರಕರಣ ಹೊಂದಿರುವ ರಾಷ್ಟ್ರಗಳ ಪೈಕಿಯಲ್ಲಿ ಭಾರತ ವಿಶ್ವದಲ್ಲಿಯೇ ಅಗ್ರಸ್ಥಾನದಲ್ಲಿದೆ. ಆದರೆ, ಮಹಾರಾಷ್ಟ್ರದ ನೂಲು ಬಿಚ್ಚುವ ಕಾರ್ಖಾನೆಗಳಿಂದ ಹಿಡಿದು ಕೊಲ್ಕತ್ತಾದ ಜನದಟ್ಟಣೆಯ ಮಾರುಕಟ್ಟೆವರೆಗೂ ಕೆಲಸ ಮಾಡಲು ಜನರು ವಾಪಸ್ಸಾಗುತ್ತಿದ್ದಾರೆ.ಹಬ್ಬಗಳ ಉತ್ಸಾಹದಲ್ಲಿ ಸಾಂಕ್ರಾಮಿಕ ರೋಗವನ್ನು ಮರೆಯುತ್ತಿದ್ದಾರೆ.

ಮಾರ್ಚ್ ನಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್ ನಿಂದ ಲಕ್ಷಾಂತರ ಜನರು ಹಸಿವಿನಿಂದ ಬಳಲಿದ ನಂತರ ಸರ್ಕಾರ ಮತ್ತು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದ ಜನರು ಜೀವನ ಮಾಡಲು ನಿರ್ಧರಿಸಿದ್ದಾರೆ.

ಉದಾಹರಣೆಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ವಯಸ್ಸಾದ ಅತ್ತೆಯನ್ನು ನೋಡಿಕೊಳ್ಳುತ್ತಿದ್ದ ಸೋನಾಲಿ ದಂಗೆ ಎಂಬವರು ಕೊರೋನಾ ವೈರಸ್ ಕಾರಣದಿಂದ ಈ ವರ್ಷ ಆಸ್ಪತ್ರೆಗೆ ದಾಖಲಾಗಿದ್ದರು.ಲಾಕ್ ಡೌನ್ ಅವಧಿಯಲ್ಲಿ ಕೂಡಿಟಿದ್ದ ಹಣವೆಲ್ಲಾ ಖರ್ಚಾಗಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಮರಳಬೇಕಾಯಿತು. ಅಲ್ಲಿ ಅವರು ತಿಂಗಳಿಗೆ 25 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಈಗ ನಾನು ಚೇತರಿಸಿಕೊಂಡಿದ್ದು, ಇನ್ನು ಮುಂದೆ ರೋಗದ ಬಗ್ಗೆ ಹೆದರುವುದಿಲ್ಲ ಎಂದು ಪೂರ್ವ ಮುಂಬೈನ ನೊಬೆಲ್ ನೈರ್ಮಲ್ಯ ಸ್ಥಾವರದಲ್ಲಿ ಕೆಲಸ ಮಾಡುವ ಸೋನಾಲಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

1947ರಿಂದ ಇದೇ ಮೊದಲಿಗೆ ಇಂತಹ ಕೆಟ್ಟ ಪರಿಸ್ಥಿತಿ

ಶ್ರೀಮಂತ ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ರೋಗದ ಖಚಿತತೆ ಪ್ರಮಾಣವು ಹೆಚ್ಚಾಗಿದೆ. ಅಮೆರಿಕದಲ್ಲಿ ಸಾವಿನ ಸಂಖ್ಯೆ ಭಾರತಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಬಡ ದೇಶಗಳು ಹೆಚ್ಚಾಗಿ ಕೆಟ್ಟ ಆರ್ಥಿಕ ನಷ್ಟವನ್ನು ಅನುಭವಿಸಿವೆ, ವಿಶ್ವದಾದ್ಯಂತ 150 ಮಿಲಿಯನ್ ಜನರು ತೀವ್ರ ಬಡತನಕ್ಕೆ ಸಿಲುಕಬಹೆಂದು ವಿಶ್ವಬ್ಯಾಂಕ್ ಅಂದಾಜಿಸಿದೆ. 

ತಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಹೆಣಗಾಡುತ್ತಿರುವ ಪೋಷಕರಿಗೆ ನೆರವಾಗುವ ಕಾರ್ಯದಲ್ಲಿ ಅನೇಕ ಮಕ್ಕಳು ತೊಡಗಿಸಿಕೊಂಡಿದ್ದಾರೆ. ಸಾವಿರಾರು ಯುವತಿಯರನ್ನು ಬಲವಂತವಾಗಿ ಮದುವೆ ಮಾಡಲಾಗುತ್ತಿದೆ ಎಂದು ಹೋರಾಟಗಾರರು ಹೇಳುತ್ತಾರೆ.

ಭಾರತದ ಜಿಡಿಪಿ ಈ ವರ್ಷ ಶೇಕಡಾ 10.3 ರಷ್ಟು ಕುಗ್ಗಲಿದೆ ಎಂದು ಐಐಎಫ್ ಅಂದಾಜಿಸಿದೆ.ಇದು ಯಾವುದೇ ಪ್ರಮುಖ ಅಭಿವೃದ್ಧಿ ಶೀಲ ರಾಷ್ಟ್ರಗಳ ಅತಿದೊಡ್ಡ ಕುಸಿತವಾಗಿದೆ. 1947 ರ ಸ್ವಾತಂತ್ರ್ಯದ ನಂತರದ  ಅತ್ಯಂತ ಕೆಟ್ಟ ಪರಿಸ್ಥಿತಿಯಾಗಿದೆ. 

ಲಾಕ್‌ಡೌನ್ ದುರಂತ

ಲಾಕ್ ಡೌನ್ ನಿಂದ ಅಸಂಘಟಿತ ವಲಯದ ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದು,  ನಿರ್ಗತಿಕರಾಗಿದ್ದಾರೆ. ಅದು ಯಾರಿಗೂ ಮತ್ತೆ ಬರಬಾರದು ಎಂದು ಕೊಲ್ಕತ್ತಾದ ನ್ಯೂ ಮಾರ್ಕೆಟ್ ಪ್ರದೇಶದಲ್ಲಿ ಅಂಗಡಿ ಇಟ್ಟುಕೊಂಡಿರುವ 42 ವರ್ಷದ ಗಾರ್ಗಿ ಮುಖರ್ಜಿ ಹೇಳುತ್ತಾರೆ.

ಬದುಕಲು ಜನರು ಹೊರಗಡೆ ಬಂದು ಕೆಲಸ ಮಾಡಬೇಕು, ಒಂದು ವೇಳೆ ಸಂಪಾದನೆ ಮಾಡದಿದ್ದರೆ ನಿಮ್ಮ ಕುಟುಂಬಕ್ಕೆ ಆಹಾರ ಒದಗಿಸಲು ಆಗಲ್ಲ ಎಂದರು.

ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಹಿಂದೂಗಳು ದುರ್ಗಾ ಪೂಜೆ, ದಸರಾ, ಮತ್ತು ದಿವಾಳಿಯಂತಹ ದೊಡ್ಡ ಹಬ್ಬ ಆಚರಿಸುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಖಂಡಿತವಾಗಿಯೂ ಕೊರೋನಾಗೆ ಭಯಪಡಬೇಕು ಆದರೆ, ನಾನು ಏನು ಮಾಡೋದು, ದುರ್ಗಾ ಪೂಜೆಯ ಕ್ಷಣಗಳನ್ನು ಕಳೆದುಕೊಳ್ಳಲ್ಲ ಎಂದು 25 ವರ್ಷದ  ಗೃಹಿಣಿ ತಿಯಾಸ್ ಭಟ್ಟಾಚಾರ್ಯ ದಾಸ್ ಹೇಳುತ್ತಾರೆ.

ಹಸಿವು ಅಥವಾ ವೈರಸ್

ಹಸಿವಿನಿಂದ ಸಾಯುವುದು ಅಥವಾ ಸೋಂಕಿನಿಂದ ಸಾಯುವುದನ್ನು ಜನರು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಅದರಿಂದ ಸಾಯಲುಬಹುದು ಇಲ್ಲವೇ ಬದುಕಲುಬಹುದೆಂದು ಮುಂಬೈ ಮೂಲದ ಇಂಡಿಯಾ ರೆಟಿಂಗ್ ಅಂಡ್ ರಿಸರ್ಚ್ ಏಜೆನ್ಸಿಯ ಪ್ರಧಾನ ಆರ್ಥಿಕ ತಜ್ಞ ಸುನೀಲ್ ಕುಮಾರ್ ಸಿನ್ಹಾ ಹೇಳಿದರು.

ಸೋಂಕು ಹರಡುವಿಕೆಗೆ ಸರ್ಕಾರ ಸುಮ್ಮನೆ ಬಿಡಬಾರದು ಎಂದು ಮಿಚಿಗನ್ ವಿವಿಯ ಸಾಂಕ್ರಾಮಿಕ ರೋಗ ತಜ್ಞ ಭ್ರಾಮರ್ ಮುಖರ್ಜಿ ಎಚ್ಚರಿಕೆ ನೀಡಿದ್ದಾರೆ. ಸೂಕ್ತ ಮುನ್ನೆಚ್ಚರಿಕೆ ಪಾಲಿಸದಿದ್ದರೆ ಸೋಂಕು ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT