ದೇಶ

ಬಿಜೆಪಿ ತೊರೆಯುವ ಖಡ್ಸೆ ನಿರ್ಧಾರ ಆಘಾತಕಾರಿ ಕಹಿ ಸತ್ಯ: ಮಹಾರಾಷ್ಟ್ರ ಬಿಜೆಪಿ ನಾಯಕರು 

Srinivas Rao BV

ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ್ ಖಡ್ಸೆ ಅವರು ಬಿಜೆಪಿ ತೊರೆಯುವ ನಿರ್ಧಾರವನ್ನು ಬಿಜೆಪಿ ನಾಯಕರು ಆಘಾತಕಾರಿ ಹಾಗೂ ಕಹಿ ಸತ್ಯ ಎಂದು ಹೇಳಿದ್ದಾರೆ. 

ಮಹಾರಾಷ್ಟ್ರ ಜಯಂತ್ ಪಾಟೀಲ್ ಖಡ್ಸೆ ಅವರು ಆಡಳಿತಾರೂಢ ಎನ್ ಸಿಪಿ ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದರು. 

ಖಡ್ಸೆ ಅವರ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್, ಖಡ್ಸೆ ಅವರ ರಾಜೀನಾಮೆ ಪತ್ರ ಬರುವವರೆಗೂ ಅವರು ಬಿಜೆಪಿಯಲ್ಲೇ ಉಳಿಯಲಿದ್ದಾರೆ ಎಂಬ ವಿಶ್ವಾಸವಿತ್ತು. 

ಮಾತುಕತೆ ಮೂಲಕ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಆಶಾವಾದಿಗಳಾಗಿದ್ದೆವು ಹಾಗೂ ಕೆಲವು ನಾಯಕರ ಜೊತೆಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಪಕ್ಷದಲ್ಲೇ ಮುಂದುವರೆಯಲಿದ್ದಾರೆ ಎಂದು ಭಾವಿಸಿದ್ದೆವು, ಖಡ್ಸೆ ಅವರ ಮುಂದಿನ ರಾಜಕೀಯ ಭವಿಷ್ಯಕ್ಕೆ ಒಳಿತಾಗಲಿ ಎಂದು ಪಾಟೀಲ್ ಶುಭ ಕೋರಿದ್ದಾರೆ.

ಖಡ್ಸೆ ಬಿಜೆಪಿ ತೊರೆದಿರುವುದು ಕಹಿ ಸತ್ಯ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡುವ ಅಗತ್ಯವಿರಲಿಲ್ಲ. ಹಲವು ವರ್ಷಗಳಿಂದ ಅವರು ಬಿಜೆಪಿಗಾಗಿ ದುಡಿದಿದ್ದರು ಎಂದು ಪಾಟೀಲ್ ಹೇಳಿದ್ದಾರೆ. 

ಈ ನಡುವೆ ಪ್ರತಿಕ್ರಿಯೆ ನೀಡಿರುವ ಮಾಹಾರಾಷ್ಟ್ರ ಬಿಜೆಪಿಯ ಮಾಜಿ ಅಧ್ಯಕ್ಷ ಸುಧೀರ್ ಮುಂಗಂಟಿವಾರ್ ಬಿಜೆಪಿಯನ್ನು ಖಡ್ಸೆ ತೊರೆದಿದ್ದು ಏಕೆ ಎಂಬುದರ ಬಗ್ಗೆ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

SCROLL FOR NEXT