ದೇಶ

ರಷ್ಯಾದ ಕೋವಿಡ್-19 'ಸ್ಪುಟ್ನಿಕ್' ಲಸಿಕೆಗೆ ಭಾರತದಲ್ಲಿ ಪ್ರಯೋಗ ತಾಣವನ್ನೇ ಗೊತ್ತು ಮಾಡಿಲ್ಲ!

Srinivasamurthy VN

ನವದೆಹಲಿ: ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ ಗೆ ಭಾರತದಲ್ಲಿ ಪ್ರಯೋಗಾತ್ಮಕ ಪರೀಕ್ಷೆ ನಡೆಸಲು ಕಳೆದ ವಾರವಷ್ಟೇ ಡಿಸಿಜಿಐನಿಂದ ಅನುಮತಿ ನೀಡಲಾಗಿದೆಯಾದರೂ, ಲಸಿಕಾ ಪ್ರಯೋಗ ತಾಣವನ್ನೇ ಗೊತ್ತು ಮಾಡಿಲ್ಲ ಎಂದು ಹೇಳಲಾಗಿದೆ.

ಕಳೆದ ವಾರ ಭಾರತದಲ್ಲಿ ಕ್ಲಿನಿಕಲ್ ಪ್ರಯೋಗಗಳಿಗೆ ನಿಯಂತ್ರಕ ಅನುಮೋದನೆಗಳನ್ನು ಪಡೆದ ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ಮೊದಲು 100 ಸ್ವಯಂ ಸೇವಕರಲ್ಲಿ ಪ್ರಯೋಗಿಸಲಾಗುತ್ತದೆ.  ಈ ಪ್ರಯೋಗದ ಮೇಲುಸ್ತುವಾರಿಯನ್ನು ಡಾ. ರೆಡ್ಡಿ ಪ್ರಯೋಗಾಲಯಕ್ಕೆ ನೀಡಲಾಗಿದೆ.  ಆದರೆ ಈ ವರೆಗೂ ಲಸಿಕೆ ಪ್ರಯೋಗಾ ತಾಣವನ್ನೇ ಅಂತಿಮಗೊಳಿಸಿಲ್ಲ. ಪ್ರಾಯೋಗಿಕ ತಾಣ ಅಂತಿಮಗೊಳಿಸುವ ಸಂಬಂಧ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ ಎಂದು ಹೇಳಲಾಗಿದೆ. 

2ನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ 100 ಮಂದಿ ಸ್ವಯಂ ಸೇವಕರ ಮೇಲಿನ ಪ್ರಯೋಗದ ವೇಳೆ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಡೇಟಾವನ್ನು ಉತ್ಪಾದಿಸಬೇಕು ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಮುಂದುವರಿಯುವ ಮೊದಲು ಮೌಲ್ಯಮಾಪನಕ್ಕೆ ಸಲ್ಲಿಸಬೇಕು ಎಂದು ಸಮಿತಿ ಹೇಳಿದೆ. 

SCROLL FOR NEXT