ದೇಶ

ದೇಶದ ನಕ್ಷೆಯನ್ನು ತಪ್ಪಾಗಿ ತೋರಿಸಿದ ಟ್ವಿಟರ್ ಗೆ ಕೇಂದ್ರ ಸರ್ಕಾರ ಎಚ್ಚರಿಕೆ

Nagaraja AB

ನವದೆಹಲಿ: ಟ್ವಿಟರ್ ಸಿಇಒ ಜಾಕ್ ಡೋರ್ಸಿ ಅವರಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರ, ದೇಶದ ನಕ್ಷೆಯನ್ನು ತಪ್ಪಾಗಿ ನಿರೂಪಿಸುವುದರ ಬಗ್ಗೆ ತೀವ್ರ ಅಸಮ್ಮತಿಯನ್ನು ತಿಳಿಸಿದೆ ಮತ್ತು ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಅಗೌರವಗೊಳಿಸುವ ಮೈಕ್ರೋ-ಬ್ಲಾಗಿಂಗ್ ವೇದಿಕೆಯ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಪ್ರತಿಪಾದಿಸಿದೆ.

ಇಂತಹ  ಪ್ರಯತ್ನಗಳು ಟ್ವಿಟ್ಟರ್ ಗೆ  ಅಪಖ್ಯಾತಿಯನ್ನು ತರುವುದಲ್ಲದೆ, ಅದರ ತಟಸ್ಥತತೆ ಮತ್ತು ಪ್ರಾಮಾಣಿಕತೆ ಬಗೆಗಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಐಟಿ ಕಾರ್ಯದರ್ಶಿ ಅಜಯ್ ಸಾಹ್ನಿಕಠಿಣ ಪದದ ಪತ್ರದ ಮೂಲಕ ಟ್ವೀಟರ್ ಗೆ ಎಚ್ಟರಿಕೆ ನೀಡಿದ್ದಾರೆ.ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಲೇಹ್ ಫೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಲ್ಲಿರುವುದಾಗಿ ಟ್ವೀಟರ್ ಭೂ ನಕ್ಷೆ ತೋರಿಸಿತ್ತು.

ಲೇಹ್ ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಕೇಂದ್ರ ಸ್ಥಾನವಾಗಿದೆ. ಲಡಾಖ್ ಮತ್ತು ಲೇಹ್ ಜಮ್ಮು-ಕಾಶ್ಮೀರದ ಆಂತರಿಕ ಮತ್ತು ಅವಿಭಾಜ್ಯ ಅಂಗವಾಗಿವೆ ಎಂದು ಐಟಿ ಕಾರ್ಯದರ್ಶಿ ಪತ್ರದಲ್ಲಿ ನೆನಪು ಮಾಡಿಕೊಟ್ಟಿದ್ದಾರೆ.

ದೇಶದ ನಾಗರಿಕರ ಸೂಕ್ಷ್ಮತೆಯನ್ನು ಗೌರವಿಸುವಂತೆ ಟ್ವೀಟರ್ ಗೆ ಸರ್ಕಾರ ಸೂಚಿಸಿದ್ದು, ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವತೆಯನ್ನು ಅಗೌರವ ತೋರಿಸುವುದು ಕಾನೂನುಬಾಹಿರ ಮತ್ತು ಸ್ವೀಕಾರರ್ಹವಲ್ಲಾ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. 

SCROLL FOR NEXT