ದೇಶ

ಕೋವಿಡ್-19: ಮುಂದಿನ ಮೂರು ತಿಂಗಳು ನಿರ್ಣಾಯಕ- ಕೇಂದ್ರ ಸರ್ಕಾರ

Nagaraja AB

ನವದೆಹಲಿ: ದೇಶದಲ್ಲಿನ ಕೊರೋನಾ ವೈರಸ್ ಪರಿಸ್ಥಿತಿಯನ್ನು ನಿರ್ಧರಿಸುವಲ್ಲಿ ಮುಂದಿನ ಮೂರು ತಿಂಗಳುಗಳು ನಿರ್ಣಾಯಕವಾಗಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಶುಕ್ರವಾರ  ಹೇಳಿದ್ದಾರೆ.

ಮುಂಬರುವ ಹಬ್ಬಗಳು ಹಾಗೂ ಚಳಿಗಾಲದ ಸಂದರ್ಭದಲ್ಲಿ ಜನರು ಕೋವಿಡ್ -19 ನಿಯಂತ್ರಿಸುವಲ್ಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಒತ್ತಾಯಿಸಿದ್ದಾರೆ. ದೇಶದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 7 ಲಕ್ಷಕ್ಕಿಂತಲೂ ಕಡಿಮೆಯಾಗಿರುವುದನ್ನು ಒತ್ತಿ ಹೇಳಿದ್ದಾರೆ.

ಉತ್ತರ ಪ್ರದೇಶದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು, ಮತ್ತಿತರ ಹಿರಿಯ ಅಧಿಕಾರಿಗಳೊಂದಿಗೆ ಕೋವಿಡ್-19 ಕುರಿತು ಪರಾಮರ್ಶೆ ನಡೆಸಿದ ಅವರು, ಕಳೆದ ಮೂರು ತಿಂಗಳಿನಲ್ಲಿ ಕೋವಿಡ್-19 ಅಂಕಿಅಂಶಗಳಲ್ಲಿ ಮಹತ್ವದ ಪ್ರಗತಿಯಾಗಿರುವುದಾಗಿ ತಿಳಿಸಿದರು.

ದಿನವೊಂದಕ್ಕೆ ದಾಖಲಾಗುತ್ತಿದ್ದ 95 ಸಾವಿರ ಪ್ರಕರಣಗಳ ಸಂಖ್ಯೆ ಪ್ರತಿ ದಿನಕ್ಕೆ 55 ಸಾವಿರ ಪ್ರಕರಣಗಳಿಗೆ ಗಣನೀಯವಾಗಿ ಕಡಿಮೆಯಾಗಿದೆ. ಚೇತರಿಕೆ ಪ್ರಮಾಣ ಶೇ.90ರ ಸನ್ನಿಹದಲ್ಲಿದೆ. ಮರಣ ಪ್ರಮಾಣ ಕೂಡಾ ಇಳಿದಿದೆ. ಕೇವಲ ಒಂದು ಪ್ರಯೋಗಾಲಯವಿದ್ದ ದೇಶದಲ್ಲಿ ಇಂದು ಸುಮಾರು 2 ಸಾವಿರ ಪ್ರಯೋಗಾಲಯಗಳಿವೆ. ದೇಶಾದ್ಯಂತ ಕೋವಿಡ್-19 ಪರೀಕ್ಷೆ ಪ್ರಮಾಣ 10 ಕೋಟಿಯನ್ನು ದಾಟಿದೆ ಎಂದು ಹೇಳಿದರು.

ಈ ಎಲ್ಲಾ ಅಂಕಿಅಂಶಗಳು ದೇಶ ಕೋವಿಡ್-19 ನಿಯಂತ್ರಣದ ನಿಟ್ಟಿನಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ತೋರಿಸುತ್ತಿದೆ. ಆದರೆ, ಮುಂದಿನ ಮೂರು ತಿಂಗಳು ಸೋಂಕು ಪರಿಸ್ಥಿತಿ ನಿರ್ಧರಿಸುವಲ್ಲಿ ನಿರ್ಣಾಯಕವಾಗಿದ್ದು, ಜನರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕೆಂದು ಅವರು ಸಲಹೆ ನೀಡಿದರು.

SCROLL FOR NEXT