ಉತ್ತರಪ್ರದೇಶ ಶಾಸಕ ಸುರೇಂದ್ರ ಸಿಂಗ್ 
ದೇಶ

ಕ್ಯಾಮೆರಾದಲ್ಲಿ ಸೆರೆ: ವಿವಾದಾತ್ಮಕ ಶಾಸಕ ಸುರೇಂದ್ರ ಸಿಂಗ್ ಮೇಲೆ ಹೂ ಮಳೆ ಸುರಿಸಿದ ಬಿಜೆಪಿ ರಾಜ್ಯಾಧ್ಯಕ್ಷ

ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರು ತಮ್ಮ ಪಕ್ಷದ ವಿವಾದಾತ್ಮಕ ಶಾಸಕ ಸುರೇಂದ್ರ ಸಿಂಗ್ ಅವರ ಮೇಲೆ ಹೂ ಮಳೆ ಸುರಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಲ್ಲಿಯಾ: ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರು ತಮ್ಮ ಪಕ್ಷದ ವಿವಾದಾತ್ಮಕ ಶಾಸಕ ಸುರೇಂದ್ರ ಸಿಂಗ್ ಅವರ ಮೇಲೆ ಹೂ ಮಳೆ ಸುರಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದುರ್ಜನ್ ಪುರ ಗ್ರಾಮದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಪ್ರಮುಖ ಆರೋಪಿಯನ್ನು ಬೆಂಬಲಿಸುವ ಹೇಳಿಕೆ ನೀಡಿದ್ದ ಸುರೇಂದ್ರ ಸಿಂಗ್ ಅವರಿಗೆ ಬಿಜೆಪಿ ನೋಟಿಸ್ ನೀಡಿದ ಬೆನ್ನಲ್ಲೇ ರಾಜ್ಯಾಧ್ಯಕ್ಷರನ್ನು ವಿವಾದಾತ್ಮಕ ಶಾಸಕನಿಗೆ ಹೂ ಮಳೆ ಸುರಿಸಿ ಅಭಿನಂದಿಸಿರುವ ವಿಡಿಯೋ ಈಗ ವೈರಲ್ ಆಗಿದೆ.

ಸಿಕಂದರ್‌ಪುರ ಪ್ರದೇಶದ ಕಥೌಡಾ ಗ್ರಾಮದಲ್ಲಿರುವ ಕೃಷ್ಣ ದೇವಸ್ಥಾನದ 'ಭೂಮಿ ಪೂಜೆ' ಕಾರ್ಯಕ್ರಮದ ವೇಳೆ ಸ್ವತಂತ್ರ ದೇವ್ ಸಿಂಗ್ ಹಾಗೂ ಸುರೇಂದ್ರ ಸಿಂಗ್ ಅಕ್ಕಪಕ್ಕದಲ್ಲಿಯೇ ಕುಳಿತ್ತಿದ್ದಾರೆ. ಈ ವೇಳೆ ಸುರೇಂದ್ರ ಸಿಂಗ್ ಮೇಲೆ ರಾಜ್ಯ ಬಿಜೆಪಿ ಅಧ್ಯಕ್ಷರು ಹೂವಿನ ದಳಗಳನ್ನು ಸುರಿಸುತ್ತಾರೆ.

ಇನ್ನು ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ, ಕಾರ್ಯಕ್ರಮದಲ್ಲಿ ಹಾಜರಿದ್ದ ಬಿಜೆಪಿಯ ಸಲೆಂಪೂರ್ ಸಂಸದ ರವೀಂದ್ರ ಕುಶ್ವಾಹಾ ಅವರು, ಸ್ವತಂತ್ರ ದೇವ್ ಸಿಂಗ್ ಅವರು ಮಾತ್ರ ಈ ಬಗ್ಗೆ ಉತ್ತರಿಸುತ್ತಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!

ಅಭಿಮನ್ಯು ಇಲ್ಲದ ದಸರಾ; ಈ ಬಾರಿ ಹೊರೋದ್ಯಾರು ಅಂಬಾರಿ?