ದೇಶ

ಕೆಲಸಕ್ಕೆ ಗಡ್ಡವೇ ಅಡ್ಡವಾಯ್ತು: ಉತ್ತರಪ್ರದೇಶದಲ್ಲಿ ಎಸ್ಐ ಅಮಾನತು!

Vishwanath S

ಮೀರತ್: ಉತ್ತರಪ್ರದೇಶದಲ್ಲಿ ಸಬ್ ಇನ್ ಸ್ಪೆಕ್ಟರ್ ಗಡ್ಡ ಬೆಳೆಸಿದ್ದಾರೆ ಎಂದು ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. 

ಗಡ್ಡ ತೆಗೆಯುವಂತೆ ಪೊಲೀಸ್ ಇನ್ ಸ್ಪೆಕ್ಟರ್ ಇಂಟೆಸರ್ ಅಲಿ ಅವರಿಗೆ ಮೂರು ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ ಗಡ್ಡ ಬೆಳೆಸಬೇಕೆಂದರೆ ಅನುಮತಿ ನೀಡಲಾಗಿತ್ತು. ಇದೆಲ್ಲಾವನ್ನು ಲೆಕ್ಕಿಸದೆ ಗಡ್ಡ ಬೆಳೆಸಿದ್ದಕ್ಕಾಗಿ ಅಲಿ ಅವರನ್ನು ಅಮಾತನು ಮಾಡಲಾಗಿದೆ. 

ಗಡ್ಡ ತೆಗೆಯುವಂತೆ ಶೋಕಾಸ್ ನೋಟಿಸ್ ಸಹ ನೀಡಲಾಗಿತ್ತು. ಆದರೆ ಇದಕ್ಕೆ ಉತ್ತರಿಸಿದೆ ಸುಮ್ಮನಿದ್ದರು. ಹೀಗಾಗಿ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಅಲಿ ಅವರನ್ನು ಅಮಾನತಿನಲ್ಲಿಡಲಾಗಿದೆ ಎಂದು ಎಸ್ ಪಿ ಬಾಘ್ಪತ್ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ. 

ಯಾರೇ ಆಗಲಿ ಗಡ್ಡ ಬೆಳೆಸಬೇಕೆಂದರೆ ಮೊದಲಿಗೆ ಅನುಮತಿ ಪಡೆಯಬೇಕು. ಆದರೆ ಇಂಟೆಸರ್ ಅಲಿ ಅನುಮತಿಯನ್ನು ಪಡೆದಿರಲಿಲ್ಲ. ಅಲ್ಲದೆ ಹಲವು ಬಾರಿ ಗಡ್ಡ ತೆಗೆಯುವಂತೆ ಎಚ್ಚರಿಸಲಾಗಿತ್ತು ಎಂದರು. 

ಅಮಾನತಿನ ಬಗ್ಗೆ ಪ್ರತಿಕ್ರಿಯಿಸಿರುವ ಅಲಿ, ಗಡ್ಡ ಬಿಡಲು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದ್ದಾರೆ.

SCROLL FOR NEXT