ದೇಶ

ಆ ವಿಷಯದಲ್ಲಿ ಅಣ್ಣ ತಂಗಿ ಮೌನವಾಗಿರುವುದು ಏಕೆ?: ರಾಹುಲ್ ಗಾಂಧಿ, ಪ್ರಿಯಾಂಕಾ ವಿರುದ್ಧ ನಿರ್ಮಲಾ ಸೀತಾರಾಮನ್ ವಾಗ್ದಾಳಿ

Srinivasamurthy VN

ನವದೆಹಲಿ: ಪಂಜಾಬ್ ನಲ್ಲಿ ಬಿಹಾರದ ದಲಿತ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಘಟನೆಯ ಬಗ್ಗೆ ಕಾಂಗ್ರೆಸ್ ಪಕ್ಷ ಅಣ್ಣ ತಂಗಿ ಏಕೆ ಮೌನ ವಹಿಸಿದ್ದಾರೆ ಎಂದು ಬಿಜೆಪಿ ನಾಯಕಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಶನಿವಾರ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ನಡೆಯುವ ಯಾವುದೇ ಘಟನೆಗಳ ಬಗ್ಗೆ ಈ ನಾಯಕರು ಮಾತನಾಡುವುದಿಲ್ಲ , ರಾಜಕೀಯ ಲಾಭಗಳಿಗಾಗಿ ಆಯ್ದೆ ರಾಜ್ಯಗಳಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳ  ಬಗ್ಗೆ ಅಣ್ಣ ತಂಗಿ ರಾಜಕೀಯ ಮಾತನಾಡುತ್ತಾರೆ ಎಂದು ಆರೋಪಿಸಿದರು.

ಬಿಹಾರದ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸಲು ಬಿಜೆಪಿ ಬೆಂಬಲವಾಗಿ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ ಸಹೋದರ ವಿರುದ್ದ ವೂ ಅತ್ಯಾಚಾರ ಪ್ರಕರಣಗಳಿದ್ದು, ಹಾಗಾಗಿ ಅವರು ಈ ಘಟನೆಯ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.  ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಮಾಧ್ಯಮಗಳ ಮೇಲೆ ದಾಳಿ ನಡೆಯುತ್ತಿವೆ, ಮಹಾರಾಷ್ಟ್ರ, ಚತ್ತೀಸ್ ಘಡದಲ್ಲಿ ಪತ್ರಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ದೂರಿದರು, ಕಾಂಗ್ರೆಸ್, ಎಡ ಪಕ್ಷಗಳ ಬುದ್ಧಿಜೀವಿಗಳು ಏಕೆ? ಈ ಕುರಿತು ಮೌನವಹಿಸಿದ್ದಾರೆ ಎಂದು ಪ್ರಶ್ನಿಸಿದರು. 

ಅಧಿಕಾರಕ್ಕೆ ಬಂದರೆ ನಾವು ಏನು ಮಾಡಲಿದ್ದೇವೆ ಎಂಬುದನ್ನು ಪಕ್ಷದ ಪ್ರಣಾಳಿಕೆಯಲ್ಲಿ ಹೇಳುವ ಹಕ್ಕು ಬಿಜೆಪಿಗಿದೆ. ಉಚಿತ ಕೊರೊನಾ ಲಸಿಕೆ ಕುರಿತು ಮಾತನಾಡಿ ಇದು ರಾಜ್ಯಗಳ ಪಟ್ಟಿಯಲ್ಲಿರುವ ಅಂಶ ಎಂದು ಹೇಳಿದರು.

SCROLL FOR NEXT