ಕಾಂಗ್ರೆಸ್ ಶಾಸಕ ಜಿತು ಪತ್ವಾರಿ 
ದೇಶ

ಶಿವರಾಜ್ ಸಿಂಗ್ ಚೌಹ್ಹಾಣ್, ಕಮಲ್ ನಾಥ್ ಕಾಲಿನ ದೂಳಿಗೂ ಸಮಾನರಲ್ಲ- ಕಾಂಗ್ರೆಸ್ ಶಾಸಕ

 ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್, ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರ ಕಾಲಿನ ದೂಳಿಗೂ ಸಹ ಯೋಗ್ಯರಲ್ಲ ಎಂದು ಕಾಂಗ್ರೆಸ್ ಶಾಸಕ ಜಿತು ಪತ್ವಾರಿ ಹೇಳಿದ್ದಾರೆ.

ಖಾಂದ್ವಾ: ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್, ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರ ಕಾಲಿನ ದೂಳಿಗೂ ಸಹ ಯೋಗ್ಯರಲ್ಲ ಎಂದು ಕಾಂಗ್ರೆಸ್ ಶಾಸಕ ಜಿತು ಪತ್ವಾರಿ ಹೇಳಿದ್ದಾರೆ.

ಖಾಂದ್ವಾ ಜಿಲ್ಲೆಯ ಮಾಂಧತದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ ಪತ್ವಾರಿ,  ಅನಿಲ್ , ಮುಖೇಶ್ ಅಂಬಾನಿ, ರತನ್ ಟಾಟಾ ಅವರಂತಹ ದೊಡ್ಡ ಉದ್ಯಮಿಗಳು ಹೆಸರು ಕೇಳಿದ್ದೇವೆ.  ಅಂತಹ ಉದ್ಯಮಿಗಳನ್ನು ಕಮಲ್ ನಾಥ್ ಕರೆಯುತ್ತಾರೆ. ಅದು ಕಮಲ್ ನಾಥ್ ಅವರ ವ್ಯಕ್ತಿತ್ವ. ಶಿವರಾಜ್ ಸಿಂಗ್ ಚೌಹ್ಹಾಣ್, ಕಮಲ್ ನಾಥ್ ಅವರ ಕಾಲಿನ ದೂಳಿಗೂ ಸಮಾನರಲ್ಲ ಎಂದರು.

ಆತ್ಮಪೂರ್ವಕವಾಗಿ ಹೀಗೆ ಹೇಳುತ್ತಿದ್ದೇನೆ. ಇದು ರಾಜಕಾರಣವಲ್ಲ,  ಕಮಲ್ ನಾಥ್ ಮಧ್ಯಪ್ರದೇಶವನ್ನು ಅಭಿವೃದ್ಧಿಪಡಿಸಲು ಬಯಸುತ್ತಾರೆ ಎಂದು ಪತ್ವಾರಿ ಹೇಳಿದರು.

ಈ ಹಿಂದೆ ಮಾತನಾಡಿದ್ದ ಕಾಂಗ್ರೆಸ್ ಮುಖಂಡ ದಿನೇಶ್ ಗುರ್ಜರ್, ಶಿವರಾಜ್ ಸಿಂಗ್ ಅವರಂತೆ ಬಡ ಕುಟುಂಬದಿಂದ ಕಮಲ್ ನಾಥ್ ಬಂದಿಲ್ಲ.  ಕಮಲ್ ನಾಥ್ ದೇಶದ ನಂಬರ್ 2 ಉದ್ಯಮಿ,5 ಎಕರೆ ಜಮೀನು ಹೊಂದಿದ್ದ ಶಿವರಾಜ್ ಸಿಂಗ್ ಚೌಹ್ಹಾಣ್ ಈಗ ಬಡವರ ರಕ್ತ ಕುಡಿದು ಸಾವಿರಾರು ಎಕರೆ ಜಮೀನು ಹೊಂದಿದ್ದಾರೆ ಎಂದು ಆರೋಪಿಸಿದ್ದರು.

ಮಧ್ಯಪ್ರದೇಶ ವಿಧಾನಸಭೆಯ 28 ಸ್ಥಾನಗಳಿಗೆ ನವೆಂಬರ್ 3 ರಂದು ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 10 ರಂದು ಮತ ಎಣಿಕೆ ಪ್ರಕಟವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ