ದೇಶ

ಹೋಶಿಯಾರ್ಪುರ್ ಅತ್ಯಾಚಾರ ಪ್ರಕರಣದ ಕುರಿತು ಉತ್ತರ ಪ್ರದೇಶದ ರೀತಿ ನಡೆದುಕೊಂಡಿಲ್ಲ; ಬಿಜೆಪಿಗೆ ರಾಹುಲ್ ಗಾಂಧಿ ತಿರುಗೇಟು

Srinivasamurthy VN

ನವದೆಹಲಿ: ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ತೋರಿದ ನಿರ್ಲಜ್ಜತನವನ್ನು ಪಂಜಾಬ್ ಸರ್ಕಾರ ತೋರಿಲ್ಲ. ಒಂದು ವೇಳೆ ತೋರಿದ್ದರೆ ಅಲ್ಲಿಗೂ ಹೋಗಿ ಪ್ರತಿಭಟನೆ ನಡೆಸುತ್ತಿದ್ದೆ. ಆದರೆ ಅಲ್ಲಿರುವುದು ಜವಾಬ್ದಾರಿಯುತ ಸರ್ಕಾರ ಎಂದು ರಾಹುಲ್ ಗಾಂಧಿ ಬಿಜೆಪಿಗೆ  ತಿರುಗೇಟು ನೀಡಿದ್ದಾರೆ.

ಪಂಜಾಬ್ ನ ಹೋಶಿಯಾರ್ಪುರ್ ದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತುಟಿಬಿಚ್ಚುತ್ತಿಲ್ಲ ಎಂಬ ಟೀಕೆಗೆ ಟ್ವೀಟ್ ಮೂಲಕ ಉತ್ತರ ನೀಡಿರುವ ರಾಹುಲ್ ಗಾಂಧಿ, 'ಪಂಜಾಬ್‌ ಮತ್ತು ರಾಜಸ್ಥಾನ ಸರಕಾರಗಳು, ಉತ್ತರಪ್ರದೇಶ ಸರಕಾರದಂತೆ  ಹೆಣ್ಣುಮಕ್ಕಳ ಅತ್ಯಾಚಾರ ಪ್ರಕರಣವನ್ನು ಕಡೆಗಣಿಸುತ್ತಿರಲಿಲ್ಲ. ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕುತ್ತಿರಲಿಲ್ಲ. ಆ ಕುಟುಂಬಕ್ಕೆ ನ್ಯಾಯ ದೊರೆಯುವುದನ್ನು ತಡೆಯುತ್ತಿರಲಿಲ್ಲ ಎಂದು. ಒಂದು ವೇಳೆ ಹಾಗೇನಾದರೂ ಆದರೆ, ನಾನೇ ಅಲ್ಲಿಗೆ ಹೋಗಿ ನ್ಯಾಯಕ್ಕಾಗಿ ಹೋರಾಡುತ್ತೇನೆ ಎಂದು ಟ್ವೀಟ್‌ ಮಾಡುವ  ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ. 

ಇನ್ನು ರಾಹುಲ್‌ ಗಾಂಧಿ ಮಾಡಿರುವ ಈ ಟ್ವೀಟ್‌ ಅನ್ನು ಚಿತ್ರನಟ ಪ್ರಕಾಶ್‌ ರಾಜ್‌ ಅವರು ಮರು ಟ್ವೀಟ್‌ ಮಾಡಿದ್ದು, 'ದಟ್ಸ್ ದ ವೇ' (ಅದೊಂದೇ ದಾರಿ) ಎಂದು ಬೆಂಬಲ ಸೂಚಿಸಿದ್ದಾರೆ.

SCROLL FOR NEXT