ದೇಶ

2021ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್

Lingaraj Badiger

ಚೆನ್ನೈ: 2021ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಮಾಡುತ್ತೇನೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಅವರು ಸೋಮವಾರ ಅನಿರೀಕ್ಷಿತ ಘೋಷಣೆ ಮಾಡಿದ್ದಾರೆ.

"ನಾನು 2021ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬಿಜೆಪಿಯಲ್ಲಿರುವ ನನ್ನ ಸಹೋದರ ಸಹೋದರಿಯರನ್ನು ವಿಧಾನಸಭೆಗೆ ಕಳುಹಿಸುವ ಕೆಲಸದಲ್ಲಿ ಮಾತ್ರ ನಾನು ತೊಡಗಿಸಿಕೊಳ್ಳುತ್ತೇನೆ" ಎಂದು ಮುರುಗನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಮುರುಗನ್ ಅವರು ಸೂಕ್ತವಲ್ಲದ ಸಮಯದಲ್ಲಿ ಈ ಘೋಷಣೆ ಮಾಡಿದ್ದಾರೆ. ಒಬ್ಬ ನಾಯಕನಾಗಿ ಮುಂದೆ ನಿಂತು ಪಕ್ಷವನ್ನು ಮುನ್ನಡೆಸಬೇಕು. ಹಿಂದಿನಿಂದಲ್ಲ. ರಾಜಕೀಯ ಪಕ್ಷದ ರಾಜ್ಯ ಅಧ್ಯಕ್ಷರು ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿರಬೇಕು. ಇದು ಪಕ್ಷದ ಕಾರ್ಯಕರ್ತರು ಮತ್ತು ಕೇಡರ್ ಗೆ ಪ್ರಚೋದನೆಯನ್ನು ನೀಡುತ್ತದೆ. ಆದರೆ ಅವರು ಚುನಾವಣೆಯಿಂದ ಹಿಂದೆ ಸರಿಯುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ರಾಜಕೀಯ ವಿಶ್ಲೇಷಕ ಥಾರಸಿ ಶ್ಯಾಮ್ ಹೇಳಿದ್ದಾರೆ.

ಇದೇ ವೇಳೆ ರಾಜ್ಯ ಬಿಜೆಪಿ ಆಯೋಜಿಸಿರುವ ವೆಟ್ರಿವೆಲ್ ಯಾತ್ರೆ ನವೆಂಬರ್ 6 ರಿಂದ ಮುರುಗನ್ ಅವರ ಆರು ನಿವಾಸಗಳಲ್ಲಿ ಒಂದಾದ ತಿರುಟ್ಟಾನಿಯಿಂದ ಪ್ರಾರಂಭವಾಗಲಿದ್ದು, ಡಿಸೆಂಬರ್ 6ರಂದು ತಿರುಚೆಂದೂರಿನಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಮುರುಗನ್ ಅವರು ಹೇಳಿದ್ದಾರೆ. ಮುಕ್ತಾಯದ ದಿನ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

SCROLL FOR NEXT