ದೇಶ

ವೀರ ಸಾರ್ವಕರ್ ಬಗ್ಗೆ ಶಿವಸೇನೆ ನಿಲುವು ಬದಲಾಗಲ್ಲ: ಸಂಜಯ್ ರಾವತ್

Nagaraja AB

ಮುಂಬೈ: ದಸರಾ ನಂತರ ಮುಂಬೈಯಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವಣ ವೀರ ಸಾರ್ವಕರ್ ವಿಚಾರದಲ್ಲಿ ವಾಕ್ಸಮರ ಮುಂದುವರೆದಿದೆ. ಕ್ರಾಂತಿಕಾರಿ ವೀರ ಸಾರ್ವಕರ್ ಬಗ್ಗೆ ಶಿವಸೇನೆ ನಿಲುವು ಬದಲಾಗುವುದಿಲ್ಲ ಎಂದು ಶಿವಸೇನೆ ಮುಖ್ಯ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.

ವೀರ ಸಾರ್ವಕರ್ ಅವರನ್ನು ಅಪಮಾನಿಸುವ ಅನುಚಿತ ಟೀಕೆಗಳು ಬಂದಾಗಲೆಲ್ಲಾ ಅವರ ಹಿಂದೆ ನಿಲ್ಲಲಾಗಿದೆ. ವೀರ ಸಾರ್ವಕರ್ ಅವರೊಂದಿಗೆ ಶಿವಸೇನೆ ಯಾವಾಗಲೂ ಭಾವನಾತ್ಮಕ ಸಂಬಂಧ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮನ್ನು ಟೀಕಿಸುವವರು ವೀರ ಸಾರ್ವಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಏಕೆ ನೀಡಲಿಲ್ಲ ಎಂಬುದಕ್ಕೆ ಉತ್ತರ ನೀಡಬೇಕಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಸಾರ್ವಕರ್ ಅವರನ್ನು ದೇಶದ್ರೋಹಿ, ನಾಥುರಾಮ್ ಗೋಡ್ಸೆ ಅವರೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು ಎಂದು ಅವಮಾನಿಸಿ ಭಾರತ ರತ್ನ ನೀಡದಿದ್ದ ಕಾಂಗ್ರೆಸ್ ಪಕ್ಷದೊಂದಿಗೆ ಶಿವಸೇನೆ ಸೇರಿ ಸರ್ಕಾರ ರಚನೆ ಮಾಡಿದದ್ದು ನಾಚಿಕೆಗೀಡಿನ ವಿಚಾರ ಎಂದು ಟ್ವಿಟಿಗರು ಟೀಕಿಸಿದ್ದಾರೆ.

SCROLL FOR NEXT