ದೇಶ

ವಿದೇಶಿ ನೆಲದಲ್ಲೂ ನಿಂತು ನಮ್ಮ ಶತ್ರುಗಳನ್ನು ಎದುರಿಸುವ ತಾಕತ್ತು ಈಗ ಭಾರತಕ್ಕಿದೆ: ಅಜಿತ್ ದೋವಲ್

Vishwanath S

ನವದೆಹಲಿ: ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡಲು ಯಾರಾದರು ಯತ್ನಿಸಿದರೆ ಅವರನ್ನು ವಿದೇಶಿ ನೆಲದಲ್ಲೂ ನಿಂತು ಎದುರಿಸುವ ತಾಕತ್ತು ಈಗ ಭಾರತಕ್ಕಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪರೋಕ್ಷವಾಗಿ ಚೀನಾಗೆ ಟಾಂಗ್ ನೀಡಿದ್ದಾರೆ. 

ಭಾರತ ಇಲ್ಲಿಯವರೆಗೂ ಯಾರ ಮೇಲೂ ಮೊದಲಿಗೆ ದಾಳಿ ಮಾಡಿಲ್ಲ. ಆದರೆ ಹೊಸ ಕಾರ್ಯತಂತ್ರದ ಭಾಗವಾಗಿ ಭದ್ರತಾ ಬೆದರಿಕೆಗಳನ್ನು ಎದುರಿಸಲು ನಾವು ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ. ಪೂರ್ವ ಲಡಾಖ್ ನಲ್ಲಿ ಚೀನಾ ಸೇನೆ ಉಪಟಳ ನೀಡುತ್ತಿರುವ ಬೆನ್ನಲ್ಲೇ ಅಜಿತ್ ದೋವಲ್ ರ ಈ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ. 

ರಿಷಿಕೇಶದಲ್ಲಿ ಪರಮಾರ್ಥ್ ನಿಕೇತನ್ ಆಶ್ರಮದಲ್ಲಿ ಮಾತನಾಡಿದ ಅಜಿತ್ ದೋವಲ್ ಅವರು ನಮ್ಮ ಶತ್ರುಗಳನ್ನು ಎದುರಿಸಲು ನಮ್ಮ ನೆಲವೇ ಅಲ್ಲ. ವಿದೇಶಿ ನೆಲದಲ್ಲೂ ನಿಂತು ಹೋರಾಟ ಮಾಡುತ್ತೇವೆ. ಎಲ್ಲಿಂದ ನಮಗೆ ಬೆದರಿಕೆ ಬರುತ್ತದೆಯೋ ಅಲ್ಲಿಗೆ ಭಾರತ ಯುದ್ಧವನ್ನು ತೆಗೆದುಕೊಂಡು ಹೋಗುತ್ತದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಅಜಿತ್ ದೋವಲ್ ಅವರು ಈ ಹೇಳಿಕೆಯನ್ನು ಯಾವುದೇ ಒಂದು ದೇಶವನ್ನು ಗುರಿಯಾಗಿಸಿಕೊಂಡು ಹೇಳಿದ್ದಲ್ಲ ಎಂದು ಹೇಳಿದ್ದಾರೆ. 

SCROLL FOR NEXT