ದೇಶ

ಕೋವಿಡ್-19: ತಮಿಳುನಾಡಿನಲ್ಲಿ ಇಂದು 2522 ಮಂದಿಗೆ ಪಾಸಿಟಿವ್, ಕೇರಳದಲ್ಲಿ 5457 ಹೊಸ ಪ್ರಕರಣ

Lingaraj Badiger

ಬೆಂಗಳೂರು: ದಕ್ಷಿಣ ಭಾರತದಲ್ಲೂ ಕೊರೋನಾ ವೈರಸ್ ಅಟ್ಟಹಾಸ ಕಡಿಮೆಯಾಗುತ್ತಿದ್ದು, ಮಂಗಳವಾರ  ತಮಿಳುನಾಡಿನಲ್ಲಿ 2522 ಹಾಗೂ ಕೇರಳದಲ್ಲಿ 5457 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಚೆನ್ನೈನಲ್ಲಿ 695 ಮಂದಿ ಸೇರಿದಂತೆ ತಮಿಳುನಾಡಿನಲ್ಲಿ ಕಳೆದ 24 ಗಂಟೆಯಲ್ಲಿ 2,522 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 7,14,235ಕ್ಕೆ ಏರಿಕೆಯಾಗಿದೆ. ಅಲ್ಲದೆ ಇಂದು ಕೊರೋನಾದಿಂದ 27 ಮಂದಿ ಮೃತಪಟ್ಟಿದ್ದಾರೆ.

ಇನ್ನು ಕೇರಳದಲ್ಲಿ ಇಂದು 5457 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 24 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ದೇಶದಲ್ಲಿ ಪ್ರತಿನಿತ್ಯ ಅಧಿಕ ಸಂಖ್ಯೆಯ ಕೋವಿಡ್ ಸೋಂಕಿತರು ಗುಣಮುಖರಾಗುತ್ತಿರುವುದರಿಂದ ಮತ್ತು ಮರಣ ಪ್ರಮಾಣ ಸುಸ್ಥಿರವಾಗಿ ತಗ್ಗುತ್ತಿರುವುದರಿಂದ, ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ ಆಗುತ್ತಿರುವ ಪ್ರವೃತ್ತಿ ಮುಂದುವರಿದಿದೆ.

ಭಾರತದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣುತ್ತಿದ್ದು, ಅದೀಗ 6.25 ಲಕ್ಷಕ್ಕೆ ಇಳಿಕೆಯಾಗಿರುವುದು ಮತ್ತೊಂದು ಸಾಧನೆಯಾಗಿದೆ. ದೇಶಾದ್ಯಂತ ಪಾಸಿಟಿವ್ ಪ್ರಕರಣಗಳ ಸಂಖ್ಯೆ 6,25,857ಕ್ಕೆ ಕಡಿಮೆ ಆಗಿದ್ದು, ಒಟ್ಟು ಪ್ರಕರಣಗಳ ಶೇಕಡ 7.88ರಷ್ಟಿದೆ.

SCROLL FOR NEXT