ದೇಶ

ಬಿಹಾರ ವಿಧಾನಸಭೆ ಚುನಾವಣೆ: ಪ್ರಣಾಳಿಕೆಯಲ್ಲಿನ ಎಲ್ಲಾ ಭರವಸೆಗಳನ್ನು ಈಡೇರಿಸುವುದು ನಮ್ಮ ಗುರಿ- ಪ್ರಧಾನಿ ಮೋದಿ

Manjula VN

ದರ್ಭಾಂಗ: ಬಿಹಾರ ರಾಜ್ಯ ವಿಧಾನಸಭೆ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಎಲ್ಲಾ ಭರವಸೆಗಲನ್ನು ಈಡೇರಿಸುವುದು ನಮ್ಮ ಗುರಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ. 

ಬಿಹಾರದ ದರ್ಭಾಂಗದಲ್ಲಿನ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿಯವರು, ನಾವು ನೀಡುವ ಭರವಸೆಯನ್ನು ಈಡೇರಿಸುತ್ತೇವೆ. ಈ ಬಾರಿ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಎಲ್ಲಾ ಭವರೆಸಗಳನ್ನು ಈಡೇರಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿರುವ ಮೋದಿಯವರು, ರಾಮ ಮಂದಿರ ನಿರ್ಮಾಣದ ಕುರಿತು ನಮ್ಮನ್ನು ಪ್ರಶ್ನಿಸಲಾಗುತ್ತಿತ್ತು. ಆದರೀಗ ಅವರು ನಮ್ಮನ್ನು ಕೊಂಡಾಡಲೇಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. 

'ಜಂಗಲ್ ರಾಜ್' ನನ್ನು ರಾಜ್ಯಕ್ಕೆ ತಂದವರಿಗೆ, ಬಿಹಾರವನ್ನು ಲೂಟಿ ಮಾಡಿದವರಿಗೆ ಮತ್ತೆ ಸೋಲಿಣಿಸುವ ಸಂಕಲ್ಪವನ್ನು ಬಿಹಾರದ ಜನರು ಮಾಡಿದ್ದಾರೆ. 

ಹಲವು ವರ್ಷಗಳ ಕಾಯುವಿಕೆಯ ಬಳಿಕ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ. ಕೆಲ ರಾಜಕೀಯ ನಾಯಕರು ರಾಮ ಮಂದಿರ ನಿರ್ಮಾಣದ ದಿನಾಂಕದ ಕುರಿತು ನಮ್ಮನ್ನು ಪ್ರಶ್ನಿಸುತ್ತಿದ್ದರು. ಆದರೀಗ ಅವರೇ ನಮ್ಮನ್ನು ಶ್ಲಾಘಿಸುವ ಪರಿಸ್ಥಿತಿ ಎದುರಾಗಿದೆ. ಇದೇ ಬಿಜೆಪಿ ಹಾಗೂ ಎನ್'ಡಿಎ ಪಕ್ಷದ ಗುರುತಾಗಿದೆ. ನಾವು ನೀಡುವ ಭರವಸೆಯನ್ನು ನಾವು ಈಡೇರಿಸುತ್ತೇವೆ. 

ರಾಜ್ಯಕ್ಕೆ ಜಂಗಲ್ ರಾಜನನ್ನು ಕರೆತಂದವರು ಹಾಗೂ ಬಿಹಾರ ರಾಜ್ಯವನ್ನು ಲೂಟಿ ಮಾಡಿದವರನ್ನು ಸೋಲಿಸುವ ಸಂಕಲ್ಪವನ್ನು ಬಿಹಾರ ಜನತೆ ಮಾಡಿದ್ದಾರೆ. ಸಾಲ ಮನ್ನಾ ಮಾಡುತ್ತೇವೆಂದು ಲೂಟಿ ಮಾಡಿದ್ದಾರೆ. ಬಿಹಾರದ ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆಯಾಗುವ ಹಣದ ಮೇಲೆ ಕೆಲವರು ಕಣ್ಣಿಟ್ಟಿದ್ದು, ಬಿಹಾರ ರಾಜ್ಯದ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸಂಕಲ್ಪವನ್ನು ಎನ್'ಡಿಎ ಹೊಂದಿದೆ. ಈಗಾಗಲೇ ರಾಜ್ಯದಲ್ಲಿರುವ 90 ಲಕ್ಷ ಮಹಿಳೆಯರು ಕೇಂದ್ರದ ಉಜ್ವರ ಯೋಜನೆಯಡಿಯಲ್ಲಿ ಗ್ಯಾಸ್ ಸಂಪರ್ಕವನ್ನು ಹೊಂದಿದ್ದಾರೆ. 

130 ಜನರಿರುವ ದೇಶದಲ್ಲಿ ಕೊರೋನಾ ಪರಿಸ್ಥಿತಿ ನಿರ್ವಹಿಸಲು 8 ತಿಂಗಳ ಕಾಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿಯಿತು. ಈ ನಡುವೆ ಯಾರೊಬ್ಬರೂ ಹಸಿವಿನಿಂದ ಮಲಗಿಲ್ಲ. ದರ್ಬಂಗಾ ಮತ್ತು ಮಧುಬಾನಿಯಲ್ಲಿ 11 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಕೊಳವೆ ನೀರು ಸರಬರಾಜಿನೊಂದಿಗೆ ಸಂಪರ್ಕಿಸಲಾಗುತ್ತಿದೆ. ಪೈಪ್ಲೈನ್ ಮೂಲಕ ಕುಡಿಯುವ ನೀರು ಮನೆಗಳನ್ನು ತಲುಪುವ ರಾಜ್ಯಗಳ ಪಟ್ಟಿಗೆ ಶೀಘ್ರದಲ್ಲಿಯೇ ಬಿಹಾರ ಕೂಡ ಸೇರ್ಪಡೆಗೊಳ್ಳಲಿದೆ. ನಂತರ ಕಲುಷಿತ ನೀರಿನಿಂದ ಉಂಟಾಗುವ ರೋಗಗಳನ್ನು ನಿರ್ಮೂಲನೆ ಮಾಡಲಾಗುತ್ತದೆ, ರಾಜ್ಯದಲ್ಲಿ ಪ್ರವಾಸೋದ್ಯಮ ಸಾಮರ್ಥ್ಯವನ್ನು ವಿಸ್ತರಿಸಲಾಗುತ್ತದೆ. ಇದಕ್ಕಾಗಿ ಬಿಹಾರದ ರಸ್ತೆಗಳ ಅಭಿವೃದ್ಧಿಗೆ ರೂ.55,000 ಕೋಟಿ ನೀಡಲಾಗಿದೆ. 

ಬಡವರಿಗೆ ಶೇ 10 ರಷ್ಟು ಮೀಸಲಾತಿ ನೀಡಲಾಗಿದ್ದು, ಈ ಪ್ರದೇಶದ ಯುವಜನರು ಇದರಿಂದ ಲಾಭ ಪಡೆಯುತ್ತಿದ್ದಾರೆ. ಸರ್ಕಾರವು ದಲಿತ, ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗದ ಜನರಿಗೆ ಮೀಸಲಾತಿಯನ್ನು ಹತ್ತು ವರ್ಷಗಳವರೆಗೆ ವಿಸ್ತರಿಸಿದ್ದು ಇಲ್ಲಿನ ಯುವಕರಿಗೆ ಅನುಕೂಲವಾಗಲಿದೆ.

ಈ ಹಿಂದೆ ಸರ್ಕಾರ ನಡೆಸುತ್ತಿದ್ದವರ ಮಂತ್ರ ಪೈಸಾ ಹಜಾಮ್, ಪರಿಯೋಜನಾ ಖತಮ್ ಆಗಿತ್ತು. ಅವರಿಗೆ ಕಮಿಷನ್ ಪದದ ಮೇಲೆ ಬಹಳ ಪ್ರೀತಿ ಇದೆ. ಹೀಗಾಗಿಯೇ ಅವರು ಎಂದಿಗೂ ಅಭಿವೃದ್ಧಿ ಯೋಜನೆಗಳತ್ತ ಗಮನ ಹರಿಸಲಿಲ್ಲ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಇದೇ ವೇಳೆ ಮತಹಕ್ಕು ಚಲಾಯಿಸುತ್ತಿರುವ ಮತದಾರರಿಗೆ ಮನವಿ ಮಾಡಿಕೊಂಡಿರುವ ಮೋದಿಯವರು, ಕೊರೋನಾ ಹಿನ್ನೆಲೆಯಲ್ಲಿ ದಯವಿಟ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ, ಎಚ್ಚರದಿಂದಿರಿ ಎಂದಿದ್ದಾರೆ. 

ಕೊರೋನಾ ಸೋಂಕಿಗೊಳಗಾಗಿರುವವರು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ. 

SCROLL FOR NEXT