ದೇಶ

ಇಸ್ಲಾಂ ರಾಷ್ಟ್ರಗಳಿಂದ ಫ್ರೆಂಚ್ ಅಧ್ಯಕ್ಷರ ಮೇಲೆ ವೈಯಕ್ತಿಕ ದಾಳಿ: ಭಾರತ ಪ್ರಬಲ ಖಂಡನೆ

Raghavendra Adiga

ಇಸ್ಲಾಂ ಧರ್ಮದ ಬೆಂಬಲಿತ ಶಕ್ತಿಗಳಿಂದ ಫ್ರೆಂಚ್ ಅಧ್ಯಕ್ಷ ಇಮ್ಮಾನ್ಯುವೆಲ್ ಮಾಕ್ರೋನ್ ಅವರ ವಿರುದ್ಧದ ವೈಯಕ್ತಿಕ ದಾಳಿಯನ್ನು ಭಾರತ ಬಲವಾಗಿ ಖಂಡಿಸಿದೆ.  ಇದು ಅಂತರರಾಷ್ಟ್ರೀಯ ಭಾಷಣಗಳ ಮೂಲಭೂತ ಮಾನದಂಡಗಳ ಉಲ್ಲಂಘನೆ ಎಂದು ಹೇಳಿದೆ.

ಫ್ರೆಂಚ್ ಶಿಕ್ಷಕನ ಶಿರಚ್ಚೇಧದ ಘಟನೆ  ಕ್ರೂರ ಭಯೋತ್ಪಾದಕ ದಾಳಿಯನ್ನು ವಿದೇಶಾಂಗ  ವ್ಯವಹಾರಗಳ ಸಚಿವಾಲಯವು ಖಂಡಿಸಿದೆ ಮತ್ತು ಯಾವುದೇ ಕಾರಣಕ್ಕೂ ಅಥವಾ ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಗೆ ನಮ್ಮ ಸಹಮತವಿಲ್ಲವೆಂದು ಪ್ರತಿಪಾದಿಸಿದೆ.

"ಅಂತರರಾಷ್ಟ್ರೀಯ ಭಾಷಣದ  ಮೂಲಭೂತ ಮಾನದಂಡಗಳನ್ನು ಉಲ್ಲಂಘಿಸಿ ಅಧ್ಯಕ್ಷ  ಇಮ್ಮಾನ್ಯುವೆಲ್ ಮಾಕ್ರೋನ್ ಅವರ ಮೇಲೆ ವೈಯಕ್ತಿಕ ದಾಳಿ ನಡೆಸುವುದನ್ನು  ನಾವು ಬಲವಾಗಿ ವಿವರಿಸುತ್ತೇವೆ" ಎಂದು ಎಂಇಎ ಹೇಳಿದೆ.

"ಫ್ರೆಂಚ್ ಶಿಕ್ಷಕನ ಜೀವ ತೆಗೆದ  ಜಗತ್ತನ್ನು ಬೆಚ್ಚಿಬೀಳಿಸಿದ ಭೀಕರ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ಅವರ ಕುಟುಂಬ ಮತ್ತು ಫ್ರಾನ್ಸ್ ಜನರಿಗೆ ನಮ್ಮ ಸಂತಾಪವನ್ನು ಅರ್ಪಿಸುತ್ತೇವೆ" 

ಎಂಇಎ ಹೇಳಿಕೆಯ ನಂತರ, ಭಾರತದ ಫ್ರೆಂಚ್ ರಾಯಭಾರಿ ಇಮ್ಮಾನ್ಯುವೆಲ್ ಲೆನಿನ್ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಉಭಯ ದೇಶಗಳು ಪರಸ್ಪರ ನಂಬಿಕೆ ಇರಿಸಿಕೊಂಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು. "ಭಾರತಕ್ಕೆ ಧನ್ಯವಾದಗಳು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಫ್ರಾನ್ಸ್ ಮತ್ತು ಭಾರತ ಯಾವಾಗಲೂ ಪರಸ್ಪರ ನಂಬಿಕೆ ಇರಿಸಿಕೊಂಡಿದೆ" ಅವರು ಟ್ವೀಟ್ ಮಾಡಿದ್ದಾರೆ.

ಇಸ್ಲಾಂ ಧರ್ಮದ ಮೂಲಭೂತವಾದದ ಬಗ್ಗೆ ಕಠಿಣ ನಿಲುವು ತೆಗೆದುಕೊಂಡ  ಮತ್ತು ಪ್ರವಾದಿ ಮಹಮ್ಮದ್ ವ್ಯಂಗ್ಯಚಿತ್ರಗಳನ್ನು ಸಮರ್ಥಿಸಿಕೊಂಡ ನಂತರ ಮಾಕ್ರೋನ್ ವಿವಿಧ ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ. '

ಅಕ್ಟೋಬರ್ 16 ರಂದು ಪ್ಯಾರಿಸ್ ಹೊರವಲಯದಲ್ಲಿ ಹಾಡ ಹಗಲೇ ಫ್ರೆಂಚ್ ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿಯ ಶಿರಚ್ಚೇಧ ದ ಹಿನ್ನೆಲೆಯಲ್ಲಿ ಮಾಕ್ರೋನ್  ಇಸ್ಲಾಂ ಬಗೆಗೆ ಹೇಳಿಕೆ ನಿಡಿದ್ದರು,
 

SCROLL FOR NEXT