ದೇಶ

ಬಿಹಾರ ಚುನಾವಣೆ ನಂತರ ಸಿಎಂ ನಿತೀಶ್ ಕುಮಾರ್ ಬಿಜೆಪಿ ಸಖ್ಯ ತೊರೆಯಲಿದ್ದಾರೆ: ಚಿರಾಗ್ ಪಾಸ್ವಾನ್

Sumana Upadhyaya

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಲೋಕ ಜನಶಕ್ತಿ ಪಾರ್ಟಿ(ಎಲ್ ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್, ನಿತೀಶ್ ಕುಮಾರ್ ಮತ್ತು ಅವರ ಜೆಡಿಯು ಪಕ್ಷ ಈ ಚುನಾವಣೆ ಮುಗಿದ ನಂತರ ಬಿಜೆಪಿಯನ್ನು ತಳ್ಳಿಹಾಕಿ ರಾಷ್ಟ್ರೀಯ ಜನತಾ ದಳವನ್ನು ಸೇರಲಿದೆ ಎಂದು ಟೀಕಿಸಿದ್ದಾರೆ.

ನಿತೀಶ್ ಕುಮಾರ್ ಅವರಿಗೆ ನೀಡುವ ಪ್ರತಿಯೊಂದು ಮತಗಳೂ ಬಿಹಾರವನ್ನು ದುರ್ಬಲಗೊಳಿಸುವುದು ಮಾತ್ರವಲ್ಲದೆ ನಾಶ ಮಾಡುತ್ತದೆ. ಆದರೆ ಆರ್ ಜೆಡಿ ಮತ್ತು ಮಹಾ ಘಟಬಂಧನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಅವರು ಬಿಜೆಪಿ ತೊರೆಯಲು ಸಿದ್ಧತೆ ಮಾಡಿಕೊಂಡಿದ್ದು ಚುನಾವಣೆ ನಂತರ ಆರ್ ಜೆಡಿಗೆ ಹೋಗುತ್ತಾರೆ ಎಂದರು.

ಹಿಂದೆ ಕೂಡ ನಿತೀಶ್ ಕುಮಾರ್ ಅವರು ಆರ್ ಜೆಡಿ ಸಹಾಯದಿಂದ ಸರ್ಕಾರ ರಚಿಸಿದ್ದರು. ಕಳೆದ 15 ವರ್ಷಗಳಿಂದ ಬಿಹಾರ ಅಭಿವೃದ್ಧಿ ಆಡಳಿತದಲ್ಲಿ ಹಿಂದುಳಿದಿದೆ. ಕೆಟ್ಟ ಸ್ಥಿತಿಯಲ್ಲಿ ಬಿಹಾರ ರಾಜ್ಯವಿದೆ. ಆದರೆ ಇಂದು ನಿಮ್ಮೆಲ್ಲರ ಆಶೀರ್ವಾದದಿಂದ ನಾವು ಬಿಹಾರಿಗಳು ಮೊದಲಿಗರಾಗಿ ನಿತೀಶ್ ಕುಮಾರ್ ಮುಕ್ತ ಸರ್ಕಾರವನ್ನು ರಚಿಸಬೇಕು ಎಂದು ಕರೆ ನೀಡಿದರು.

ನಿತೀಶ್ ಕುಮಾರ್ ಅವರ ಪಕ್ಷ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಬಿಜೆಪಿ-ಎಲ್ ಜೆಪಿ ಸರ್ಕಾರ ಈ ಚುನಾವಣೆ ಮುಗಿದ ನಂತರ ಸರ್ಕಾರ ರಚಿಸಲಿವೆ ಎಂದು ಚಿರಾಗ್ ಪಾಸ್ವಾನ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

SCROLL FOR NEXT