ದೇಶ

ಮತದಾನ ಬಹಿಷ್ಕರಿಸಿದ ಬಿಹಾರ ಗ್ರಾಮಸ್ಥರು: ಕಾರಣ ಏನು ಗೊತ್ತೇ?

Srinivas Rao BV

ಬಿಹಾರ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಅ.28 ರಂದು ನಡೆಯುತ್ತಿದ್ದು, ಲಖಿಸರಾಯ್ ಜಿಲ್ಲೆಯ ಬಲ್ಗುದಾರ್ ಗ್ರಾಮಸ್ಥರು ಚುನಾವಣೆಯನ್ನೇ ಬಹಿಷ್ಕರಿಸಿದ್ದಾರೆ. 

ಗ್ರಾಮದಲ್ಲಿರುವ ಆಟದ ಮೈದಾನದಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಲಾಗಿರುವುದನ್ನು ವಿರೋಧಿಸಿರುವ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಿದ್ದು, ಪರಿಣಾಮವಾಗಿ ಒಬ್ಬನೇ ಒಬ್ಬ ಮತದಾರನೂ ಇಲ್ಲದೇ ಬೂತ್ ನಂಬರ್ 115 ಖಾಲಿಯಾಗಿತ್ತು.

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಕುಮಾರ್ ಸಿನ್ಹಾ ಈ ಬಗ್ಗೆ ಮಾತನಾಡಿದ್ದು, "ಕ್ಷೇತ್ರದಲ್ಲಿ ಒಳ್ಳೆಯ ಆಡಳಿತ ಕಣ್ಣಿಗೆ ಕಾಣುತ್ತಿದೆ. ಆದರೆ ಕೆಲವೊಂದು ಭಾಗದಲ್ಲಿ ಮತದಾನ ಬಹಿಷ್ಕರಿಸಲಾಗಿರುವ ವಾತಾವರಣ ನಿರ್ಮಾಣ ಮಾಡಲಾಗಿದ್ದು, ಸಮಾಜಘಾತುಕ ಶಕ್ತಿಗಳು ಈ ಕೆಲಸ ಮಾಡಿವೆ. ಸಮಾಜಘಾತುಕ ಶಕ್ತಿಗಳ ಪ್ರಭಾವ, ಒತ್ತಡದಿಂದಾಗಿ ಮತದಾರರು ಭಯಗೊಂಡು ಮತದಾನಕ್ಕೆ ಮುಂದಾಗಿಲ್ಲ" ಎಂದು ಹೇಳಿದ್ದಾರೆ.

"ಆಡಳಿತ ಜನರ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸುವ ಭರವಸೆ ನೀಡಿದೆ. ಆದರೆ ಜನತೆ ಸಮಾಜಘಾತುಕ ಮನಸ್ಥಿತಿಯ ವಿಪಕ್ಷಗಳ ಒತ್ತಡಕ್ಕೆ ಮಣಿದು ಮತದಾನ ಮಾಡಿಲ್ಲ" ಎಂದು ವಿಪಕ್ಷಗಳ ವಿರುದ್ಧ ಸಿನ್ಹಾ ಆರೋಪಿಸಿದ್ದಾರೆ. ಅ.28 ರಂದು 71 ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾಗಿದೆ. 
 

SCROLL FOR NEXT