ದೇಶ

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಕೇರಳದ ಮಾಜಿ ಗೃಹ ಸಚಿವ ಕೋಡಿಯೇರಿ ಬಾಲಕೃಷ್ಣನ್ ಪುತ್ರ ಇಡಿ ವಶಕ್ಕೆ

Vishwanath S

ಬೆಂಗಳೂರು: ಚಂದನವನಕ್ಕೆ ಮಾದಕ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಗೃಹ ಸಚಿವ ಕೋಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೋಡಿಯೇರಿಯನ್ನು ಬೆಂಗಳೂರು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಾಟನ್ ಪೇಟೆಯಲ್ಲಿ ದಾಖಲಾದ ಮಾದಕ ಜಾಲ ಪ್ರಕರಣದ ಪ್ರಮುಖ ಆರೋಪಿ ಅನೂಪ್ ನೊಂದಿಗೆ ಬೀನೇಶ್ ನಂಟು ಹೊಂದಿದ್ದು, ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ವೊಂದು ತೆರೆಯಲು ಬಿನೀಶ್ ಡ್ರಗ್ಸ್ ಪೆಡ್ಲರ್ ಅನೂಪ್​ಗೆ 50 ಲಕ್ಷ ರೂ ಹಣಕಾಸಿನ ನೆರವು ನೀಡಿದ್ದರು.

ಈ ಮಾಹಿತಿ ಆಧರಿಸಿ ಬೆಂಗಳೂರು ಇ ಡಿ ನೋಟಿಸ್ ನೀಡಿತ್ತು. ಹೀಗಾಗಿ ಅ. 6 ರಂದು ವಿಚಾರಣೆಗೆ ಹಾಜರಾಗಿ 6 ಗಂಟೆಗಳ ಕಾಲ ಬೀನೇಶ್ ವಿಚಾರಣೆ ಎದುರಿಸಿದ್ದು, ಈ ವೇಳೆ ಅನೂಪ್​ಗೆ ಸ್ನೇಹಿತನ ಮೂಲಕ ಹಣ ಕೊಡಿಸಿದ್ದಾಗಿ ತನಿಖಾಧಿಕಾರಿಗಳಿಗೆ ತಿಳಿಸಿದ್ದರು.

ನಂತರ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಇ.ಡಿ ಅಧಿಕಾರಿಗಳು ಬೀನೇಶ್ ಅವರಿಗೆ ಸೂಚಿಸಿದ್ದರು. ಬಿನೇಶ್ ಇಂದು ಮತ್ತೆ ಬೆಂಗಳೂರಿನ ಶಾಂತಿನಗರದ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ ಬಿನೇಶ್​ ಅವರನ್ನು ಇಡಿ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

SCROLL FOR NEXT