ದೇಶ

3 ತಿಂಗಳ ನಂತರ ಮೊದಲ ಬಾರಿಗೆ ದೇಶದಲ್ಲಿ ಕೋವಿಡ್‍-19 ಸಕ್ರಿಯ ಪ್ರಕರಣಗಳ ಸಂಖ್ಯೆ 6 ಲಕ್ಷಕ್ಕಿಂತ ಕಡಿಮೆ

Srinivasamurthy VN

ನವದೆಹಲಿ: ಕೋವಿಡ್‍-19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಮೂರು ತಿಂಗಳಲ್ಲೇ (85 ದಿನಗಳಲ್ಲಿ) ಮೊದಲ ಬಾರಿಗೆ 6 ಲಕ್ಷಕ್ಕಿಂತ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಶುಕ್ರವಾರದವರೆಗೆ 5.94 ಲಕ್ಷ ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಆಗಸ್ಟ್ 6 ರಂದು ಈ ಸಂಖ್ಯೆ 5.95 ಲಕ್ಷದಷ್ಟಿತ್ತು. ಸದ್ಯ, ಸಕ್ರಿಯ ಪ್ರಕರಣಗಳು ದೇಶದ ಒಟ್ಟು ದೃಢಪಟ್ಟ ಪ್ರಕರಣಗಳ ಪೈಕಿ ಕೇವಲ 7.35 ರಷ್ಟು (5,94,386) ಮಾತ್ರ ಇವೆ. ಇದು ಸ್ಥಿರ ಕುಸಿತದ ಪ್ರವೃತ್ತಿಯನ್ನು ಬಲಪಡಿಸಿದೆ. 

ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಭಿನ್ನವಾಗಿರುವುದು, ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳು ಹಾಗೂ ಕ್ರಮೇಣ ಪ್ರಗತಿಯನ್ನು ಬಿಂಬಿಸುತ್ತದೆ.

ಚೇತರಿಕೆ ವಿಷಯದಲ್ಲೂ ಭಾರತದಲ್ಲಿ ಸ್ಥಿರತೆಯಲ್ಲಿ ಪ್ರಗತಿ ಸಾಧಿಸುತ್ತಿದೆ. ಚೇತರಿಸಿಕೊಂಡ ಒಟ್ಟು 73,73,375 ಪ್ರಕರಣಗಳೊಂದಿಗೆ ಭಾರತ, ಜಾಗತಿಕವಾಗಿ ಅಗ್ರಸ್ಥಾನದಲ್ಲಿದೆ. ಸಕ್ರಿಯ ಪ್ರಕರಣಗಳು ಮತ್ತು ಚೇತರಿಸಿಕೊಂಡ ಪ್ರಕರಣಗಳ ನಡುವಿನ ವ್ಯತ್ಯಾಸ ನಿರಂತರವಾಗಿ ಹೆಚ್ಚುತ್ತಿದೆ. ಸದ್ಯ ಈ ಅಂತರ  6,778,989 ರಷ್ಟಿದೆ.

SCROLL FOR NEXT