ದೇಶ

ಒಮರ್ ಅಬ್ದುಲ್ಲಾ ನೇತೃತ್ವದ ಪೀಪಲ್ಸ್ ಅಲೈಯನ್ಸ್ ನಿಯೋಗ ಕಾರ್ಗಿಲ್‌ಗೆ ಭೇಟಿ

Manjula VN

ಶ್ರೀನಗರ: ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೇತೃತ್ವದ ‘ಗುಪ್ಕಾರ್ ನಿರ್ಣಯಕ್ಕಾಗಿ ಜನರ ಮೈತ್ರಿ’ (ಪೀಪಲ್ಸ್ ಅಲಯೆನ್ಸ್) ನಿಯೋಗ ಶುಕ್ರವಾರ ಮುಂಜಾನೆ ಕೇಂದ್ರಾಡಳಿತ ಪ್ರದೇಶದ ಲಡಾಖ್‌ನ ಗಡಿ ಪಟ್ಟಣವಾದ ಕಾರ್ಗಿಲ್‌ಗೆ ತೆರಳಿದೆ.

ಕಳೆದ ಆಗಸ್ಟ್ 5 ರಂದು 370 ಮತ್ತು 35 ಎ ನೇ ವಿಧಿಗಳನ್ನು ರದ್ದುಗೊಳಿಸಿದ ನಂತರ ಕಾರ್ಗಿಲ್‍ ಗೆ ಭೇಟಿ ನೀಡುತ್ತಿರುವ ಕಾಶ್ಮೀರದ ಮುಖ್ಯವಾಹಿನಿಯ ರಾಜಕೀಯ ನಾಯಕರ ನಿಯೋಗ ಇದಾಗಿದೆ. ಕಾರ್ಗಿಲ್‍ನಲ್ಲಿ ಜನರು ಹಿಂದಿನ ರಾಜ್ಯವನ್ನು ವಿಭಜನೆಗೆ ವಿರೋಧಿಸಿದ್ದಾರೆ. ರಾಜ್ಯವನ್ನು ಪುನರ್ ಸ್ಥಾಪನೆಗೆ ಒತ್ತಾಯಿಸಿದ್ದಾರೆ. ಅಲ್ಲದೆ, ಲಡಾಖ್ ಕೇಂದ್ರಾಡಳಿತ ಪ್ರದೇಶದ ಬದಲಿಗೆ ಜಮ್ಮು-ಕಾಶ್ಮೀರದ ಭಾಗವಾಗಿರಲು ಇಚ್ಛಿಸಿದ್ದಾರೆ.

ನಿಯೋಗ ಶುಕ್ರವಾರ ಮುಂಜಾನೆ ಬೇಸಿಗೆ ರಾಜಧಾನಿ ಶ್ರೀನಗರದಿಂದ ಹೊರಟು ಕಾರ್ಗಿಲ್‌ಗೆ ತೆರಳಿದೆ ಎಂದು ಮೂಲಗಳು ತಿಳಿಸಿವೆ. ನಿಯೋಗದ ಸದಸ್ಯರನ್ನು ಬರಮಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ದ್ರಾಸ್‌ಗೆ ಧಾವಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

SCROLL FOR NEXT