ದೇಶ

ಸ್ಟಾರ್​ ಪ್ರಚಾರಕ ಪಟ್ಟ ರದ್ದುಗೊಳಿಸಿದ ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಕಮಲ್ ನಾಥ್

Lingaraj Badiger

ನವದೆಹಲಿ: ಮಧ್ಯ ಪ್ರದೇಶ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಸ್ಟಾರ್​ ಪ್ರಚಾರಕ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದು ಹಾಕಿದ ಚುನಾವಣಾ ಆಯೋಗದ ವಿರುದ್ಧ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್​ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
 
ಪದೇ ಪದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದನ್ನು ಉಲ್ಲೇಖಿಸಿ ಚುನಾವಣಾ ಆಯೋಗ ಶುಕ್ರವಾರ ಕಮಲ್ ನಾಥ್ ಅವರ ಸ್ಟಾರ್ ಪ್ರಚಾರಕರ ಸ್ಥಾನಮಾನವನ್ನು ರದ್ದುಪಡಿಸಿದೆ.

ಕಮಲ್ ನಾಥ್ ಅವರು ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಇಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. 

ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಸಿದ್ಧಪಡಿಸುವುದು ರಾಜಕೀಯ ಪಕ್ಷಗಳ ಹಕ್ಕು. ಆದರೆ ಅದನ್ನು ರದ್ದುಗೊಳಿಸುವ ಮೂಲಕ ಚುನಾವಣಾ ಆಯೋಗ ತನ್ನದೇ ಆದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಕಮಲ್ ನಾಥ್ ಹೇಳಿದ್ದಾರೆ.

ಕಮಲನಾಥ್​ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದರು. ಅಲ್ಲದೇ ಈ ಕುರಿತು ಅವರಿಗೆ ನೀಡಲಾದ ಸೂಚನೆಯನ್ನು ಕಡೆಗಣಿಸಿದ್ದರು. ಈ ಹಿನ್ನಲೆ ಅವರನ್ನು ಪಕ್ಷದ ಸ್ಟಾರ್​ ಕ್ಯಾಂಪೇನರ್​ ಸ್ಥಾನಮಾನದಿಂದ ತೆಗೆದುಹಾಕುತ್ತಿರುವುದಾಗಿ ತಿಳಿಸಿದೆ.

SCROLL FOR NEXT