ದೇಶ

ತಮಿಳುನಾಡಿನಲ್ಲಿ ಬಸ್ ಸೇವೆ ಪುನಾರಂಭ, ಮಾರ್ಚ್‌ನಲ್ಲಿ ನೀಡಲಾದ ಎಂಟಿಸಿ ಮಾಸಿಕ ಪಾಸ್‌ಗಳು ಸೆ. 15 ರವರೆಗೆ ಮಾನ್ಯ

Lingaraj Badiger

ಚೆನ್ನೈ: ಮಹಾಮಾರಿ ಕೊರೋನಾ ವೈರಸ್ ಲಾಕ್ ಡೌನ್ ನಂತರ ತಮಿಳುನಾಡಿನಲ್ಲಿ ಮಂಗಳವಾರದಿಂದ ಬಸ್ ಸೇವೆ ಪುನಾರಂಭಗೊಂಡಿದ್ದು, ಸಾರಿಗೆ ಇಲಾಖೆ ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್(ಎಂಟಿಸಿ) ಮಾರ್ಚ್‌ನಲ್ಲಿ ನೀಡಿದ ಮಾಸಿಕ ಪಾಸ್‌ಗಳನ್ನು ಸೆಪ್ಟೆಂಬರ್ 15 ರವರೆಗೆ ಮಾನ್ಯತೆ ನೀಡಿದೆ.

ಎಂಟಿಸಿ ನೀಡುವ ಮಾಸಿಕ ಪಾಸ್‌ಗಳು(ಇದು ಚೆನ್ನೈನಲ್ಲಿ ಬಸ್‌ಗಳಲ್ಲಿ ಸಂಚರಿಸುವವರಿಗೆ) ಪ್ರತಿ ತಿಂಗಳ 16 ರಿಂದ 30 ದಿನಗಳವರೆಗೆ ಮಾನ್ಯವಾಗಿರುತ್ತದೆ.

ಎಂಟಿಸಿ ಬಸ್‌ಗಳು ಕಳೆದ ಮಾರ್ಚ್ 24ರ ವರೆಗೆ ಮಾತ್ರ ಸಂಚರಿಸಿದ್ದವು. ಮಾರ್ಚ್‌ನಲ್ಲಿ ನೀಡಲಾದ ಪಾಸ್‌ಗಳನ್ನು ಮಾರ್ಚ್ 24 ರವರೆಗೆ ಮಾತ್ರ ಬಳಸಲಾಗಿದ್ದರಿಂದ, ಮಾನ್ಯತೆಯನ್ನು 15 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇಂದು ಲಾಕ್‌ಡೌನ್ ಸಡಿಲಗೊಂಡ ನಂತರ ಬಸ್ ಸೇವೆ ಪುನರಾರಂಭಗೊಂಡಾಗ, ರಾಜ್ಯಾದ್ಯಂತ 6090 ಬಸ್‌ಗಳು ಕಾರ್ಯನಿರ್ವಹಿಸಿವೆ. ಎಂಟಿಸಿಯು ಸುಮಾರು 2400 ಬಸ್ಸುಗಳನ್ನು ಓಡಿಸಿದರೆ, ತಮಿಳುನಾಡು ರಾಜ್ಯ ಸಾರಿಗೆ ನಿಗಮದ(ಟಿಎನ್‌ಎಸ್‌ಟಿಸಿ) ಆರು ವಿಭಾಗಗಳ ಬಸ್ ಗಳು ಸಹ ಇಂದು ರಸ್ತೆಗಿಳಿದೆ.

ದೂರದ ಪ್ರಯಾಣಿಕರನ್ನು ಕರೆದೊಯ್ಯುವ ರಾಜ್ಯ ಎಕ್ಸ್‌ಪ್ರೆಸ್ ಸಾರಿಗೆ ನಿಗಮ(ಎಸ್‌ಇಟಿಸಿ)ದ ಬಸ್ ಸಂಚಾರ ಇನ್ನು ಆರಂಭವಾಗಿಲ್ಲ.

SCROLL FOR NEXT