ದೇಶ

ಮೋದಿ ನಿರ್ಮಿತ ವಿಪತ್ತುಗಳ ಅಡಿಯಲ್ಲಿ ಭಾರತ ತತ್ತರಿಸುತ್ತಿದೆ: ರಾಹುಲ್ ಗಾಂಧಿ

Manjula VN

ನವದೆಹಲಿ: ಕೊರೋನಾ ವೈರಸ್ ಬಿಕ್ಕಿಟ್ಟಿನಲ್ಲಿ ಜಿಡಿಪಿ ದಾಖಲೆ ಕುಸಿತ ಹಾಗೂ ಚೀನಾದ ಸೇನಾ ಪಡೆ ಲಡಾಖ್'ನಲ್ಲಿ ಪ್ರಚೋದನಾಕಾರಿ ಮಿಲಿಟರಿ ಹೆಜ್ಜೆ ಇಟ್ಟ ಎರಡು ದಿನಗಳ ಬಳಿಕ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಾಗ್ದಾಳಿ ನಡೆಸಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಪ್ರಧಾನಿ ಮೋದಿ ನಿರ್ಮಿತ ವಿಪತ್ತುಗಳ ಅಡಿಯಲ್ಲಿ ಭಾರತ ತತ್ತರಿಸುತ್ತಿದೆ ಎಂದು ಹೇಳಿದ್ದಾರೆ. 

ಭಾರತದ ಮೇಲೆ ಪರಿಣಾಮ ಬೀರಿರುವ ಮೋದಿ ನಿರ್ಮಿತ ವಿಪತ್ತುಗಳ ಪಟ್ಟಿಯನ್ನು ರಾಹುಲ್ ಅವರು ಟ್ವಿಟರ್ ನಲ್ಲಿ ಟ್ವೀಟಿಸಿದ್ದಾರೆ. 

ಮೋದಿ ನಿರ್ಮಿತ ವಿಪತ್ತುಗಳಿಂದ ಭಾರತ ತತ್ತರಿಸುತ್ತಿದೆ

  • ಐತಿಹಾಸಿಕ ಜಿಡಿಪಿ ಕಡಿತ- ಶೇ.23.9 
  • 45 ವರ್ಷಗಳಲ್ಲಿ ಅತ್ಯಂತ ಹೆಚ್ಚು ನಿರುದ್ಯೋಗ
  • 12 ಕೋಟಿ ಉದ್ಯೋಗ ನಷ್ಟ
  • ರಾಜ್ಯಗಳಿಗೆ ಜಿಎಸ್‌ಟಿ ಬಾಕಿ ಇಟ್ಟಿರುವ ಕೇಂದ್ರಸರಕಾರ
  •  ಜಾಗತಿಕವಾಗಿ ಅತ್ಯಂತ ಹೆಚ್ಚು ಕೋವಿಡ್-19 ದೈನಂದಿನ ಪ್ರಕರಣಗಳು,ಸಾವುಗಳು
  • ನಮ್ಮ ಗಡಿಗಳಲ್ಲಿ ಬಾಹ್ಯ ಆಕ್ರಮಣ
SCROLL FOR NEXT