ದೇಶ

ಪಾಂಗಾಂಗ್‌ ತ್ಸೊ ದಕ್ಷಿಣ ತೀರದಲ್ಲಿ ಪ್ರಮುಖ ಸ್ಥಳಗಳನ್ನು ಚೀನಾದಿಂದ ಮತ್ತೆ ವಶಪಡಿಸಿಕೊಂಡ ಭಾರತೀಯ ಸೇನೆ 

Srinivas Rao BV

ನವದೆಹಲಿ ಲಡಾಖ್ ಪ್ರಾಂತ್ಯದಲ್ಲಿ ಪದೇ ಪದೇ ಗಡಿ ಕ್ಯಾತೆ ತೆಗೆಯುತ್ತಿರುವ ಚೀನಾಗೆ ಭಾರತ ಭರ್ಜರಿ ತಿರುಗೇಟು ನೀಡಿದ್ದು, ಚೀನಾ ಆಕ್ರಮಿಸಿಕೊಂಡಿದ್ದ ಪಾಂಗಾಂಗ್‌ ತ್ಸೊ ದಕ್ಷಿಣ ತೀರದ ಪ್ರಮುಖ ಗುಡ್ಡಗಳನ್ನು ವಾಪಸ್ ಪಡೆದುಕೊಳ್ಳುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. 
    
ಚೀನಾ ವಿವಾದಿತ ಪ್ರದೇಶವೆಂದು ಕರೆಯುವ ಪ್ಯಾಂಗಾಂಗ್ ಲೇಕ್ ನ ಪ್ರದೇಶಗಳಲ್ಲಿ ಭಾರತೀಯ ಸೇನೆ ಪರಿಣಾಮಕಾರಿ ಸೇನಾ ನಿರ್ವಹಣೆಯನ್ನು ಹೊಂದಿದೆ.

ಈ ಬಗ್ಗೆ ಆಂಗ್ಲ ಮಾಧ್ಯಮಗಳು ವರದಿ ಪ್ರಕಟಿಸಿದ್ದು, ವಿವಾದಿತ ಪ್ರದೇಶಗಳಾದ್ಯಂತ ಸೇನೆಯನ್ನು ನಿಯೋಜಿಸಲಾಗಿದ್ದು, ಭಾರತ ಪ್ರತಿಪಾದಿಸುತ್ತಿರುವ ಎಲ್ಎಸಿಯನ್ನು ಸಂಪೂರ್ಣವಾಗಿ ಸಮರ್ಥವಾಗಿ ಕಾಪಾಡಿಕೊಳ್ಳುವಂತೆ ಸೇನಾ ನಿಯೋಜನೆ ಮಾಡಲಾಗಿದೆ ಎಂದು ವರದಿ ಪ್ರಕಟಿಸಿವೆ.

ಆ.29-30 ರಂದು ರಾತ್ರಿ ಚೀನಾದಿಂದ ಪ್ರಮುಖ ಪ್ರದೇಶಗಳನ್ನು ಭಾರತ ತನ್ನ ವಶಕ್ಕೆ ಪಡೆದಿದ್ದು, ಓರ್ವ ಜೆಸಿಒ ಹುತಾತ್ಮರಾಗಿದ್ದರೆ, ಇಬ್ಬರು ಪಿಎಲ್ಎ ಯೋಧರು ಮೃತಪಟ್ಟಿದ್ದಾರೆ. 45 ಜನರನ್ನು ಸೆರೆ ಹಿಡಿಯಲಾಗಿದೆ ಎಂದು ನಿವೃತ್ತ ಸೇನಾ ಅಧಿಕಾರಿ ಬ್ರಿಗೆಡಿಯರ್ ಎಂಪಿಎಸ್ ಬಾಜ್ವಾ ಟ್ವೀಟ್ ಮೂಲಕ ತಿಳಿದುಬಂದಿದೆ. 
 

SCROLL FOR NEXT