ದೇಶ

ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರುಣ್ ಮಿಶ್ರಾ ನಿವೃತ್ತಿ

Raghavendra Adiga

ಕೋವಿಡ್ 19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ  ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರುಣ್ ಮಿಶ್ರಾ ಸೆಪ್ಟೆಂಬರ್ 2, 2020 ರಂದು ತಾವು ನಿವೃತ್ತರಾಗುತ್ತಿದ್ದರೂ  ಬಾರ್ ಬಾಡಿಗಳ ವಿದಾಯ ಕೂಟವನ್ನು ನಿರಾಕರಿಸಿದ್ದಾರೆ.

ನ್ಯಾಯಾಲಯದ ದೀರ್ಘಕಾಲದ ಸಂಪ್ರದಾಯವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಮೂರ್ತಿ ಮಿಶ್ರಾ ಅವರನ್ನು ಇಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರೊಂದಿಗೆ ನ್ಯಾಯಪೀಠದಲ್ಲಿ ಕೂರಿಸಲಾಗಿತ್ತು. ನ್ಯಾಯಮೂರ್ತಿ ಮಿಶ್ರಾ ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುವಲ್ಲಿ ಧೈರ್ಯ ತೀರಿದ್ದು ಮುಂದಿನ ಪೀಳಿಗೆಗೆ ದಾರಿದೀಪವಾಗಿದ್ದಾರೆ ಎಂದು ಸಿಜೆಐ, ಬೊಬ್ಡೆ  ಹೇಳಿದ್ದಾರೆ.

ನ್ಯಾಯಮೂರ್ತಿ ಮಿಶ್ರಾ ಅವರು "ಕಠಿಣ ಪರಿಶ್ರಮ, ಪಾಂಡಿತ್ಯ, ಧೈರ್ಯದ ಮಾದರಿಯನ್ನು ಹಾಕಿಕೊಟ್ಟು ತೆರಳುತ್ತಿದ್ದಾರೆ. ಎಂದು ಸಿಜೆಐ ಬೊಬ್ಡೆ ಹೇಳಿದರು. ಸಿಜೆಐ ಅವರು "ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ವೈಯಕ್ತಿಕವಾಗಿ ಎದುರಿಸಬೇಕಾದ ದೊಡ್ಡ ತೊಂದರೆಗಳ ಬಗ್ಗೆ ತಿಳಿದಿದ್ದಾರೆ ಮತ್ತು ಅದರ ಹೊರತಾಗಿಯೂ ಅವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ. ಅವರು ತಮ್ಮ ಎಲ್ಲ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಎಂದು ಅವರು ನುಡಿದರು.

"ಈ ಸಂದರ್ಭದಲ್ಲಿ ಮಾತನಾಡಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ನ್ಯಾಯಮೂರ್ತಿ ಮಿಶ್ರಾ ಅವರನ್ನು ಸುಪ್ರೀಂಕೋರ್ಟ್‌ನ" ಐರನ್ ಜಡ್ಜ್  "ಎಂದು ಕರೆದರು." ನಾನು ಸುಪ್ರೀಂ ಕೋರ್ಟ್‌ನಲ್ಲಿರುಅವ್ಷ್ಟು ಕಾಲ ಇಷ್ಟು ನಿಷ್ಟುರ ನ್ಯಾನೈಷ್ಟ ನ್ಯಾಧೀಶರನ್ನು ಕಂಡಿಲ್ಲ. . ಅವರು ಅದ್ಭುತ ಕೊಡುಗೆ ನೀಡಿದ್ದಾರೆ "ಎಂದು ವೇಣುಗೋಪಾಲ್ ಹೇಳಿದರು.

SCROLL FOR NEXT