ದೇಶ

ಯುವಜನತೆ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಒದಗಿಸಿ: ಕೇಂದ್ರಕ್ಕೆ ರಾಹುಲ್ ಗಾಂಧಿ ಚಾಟಿ

Raghavendra Adiga

ನವದೆಹಲಿ: ದೇಶದಲ್ಲಿ ನಿರುದ್ಯೋಗ ಮತ್ತು ಬಡತನ ಹೆಚ್ಚಾಗಿದೆ, ಯುವಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಬೇಕು ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಧ್ಯಮ ವರದಿಯೊಂದರ ಆಧಾರದಲ್ಲಿ ಸರ್ಕಾರದ ಮೇಲೆ ಕಿಡಿಕಾರಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಕಡಿಮೆಯಾಗುತ್ತಿದೆ. ಆಗಸ್ಟ್‌ನಲ್ಲಿ ನಿರುದ್ಯೋಗ ದರ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ನಿರುದ್ಯೋಗ ಮತ್ತು ಖಾಸಗೀಕರಣದ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆಗಳ ವಿಷಯವನ್ನು ಎತ್ತಿದ್ದಾರೆ.

"2017- ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆ ಬರೆದವರ ನೇಮಕಾತಿ ಇನ್ನೂ ಆಗಿಲ್ಲ. 2018 - ಸಿಜಿಎಲ್ ಪರೀಕ್ಷೆಯ ಫಲಿತಾಶವಿನ್ನೂ ಬಂದಿಲ್ಲ. . 2019 - ಸಿಜಿಎಲ್ ಪರೀಕ್ಷೆ ನಡೆದೇ ಇಲ್ಲ.  2020ರಲ್ಲಿ ಎಸ್‌ಎಸ್‌ಸಿ ಸಿಜಿಎಲ್ - ಯಾವುದೇ ಹುದ್ದೆ ನೇಮಕಾತಿ ಕರೆದಿಲ್ಲ.  ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

"ಖಾಲಿ ಹುದ್ದೆಗಳಿದೆ ಆದರೆ ಪರೀಕ್ಷೆಗಳಿಲ್ಲ.  ಪರೀಕ್ಷೆಗಳು ನಡೆದರೆ ಫಲಿತಾಂಶಗಳಿಲ್ಲ. ಫಲಿತಾಂಶ ಹೊರಬಿದ್ದರೆ ರೆ ನೇಮಕಾತಿ ಇಲ್ಲ" ಎಂದು ಅವರು ಹೇಳಿದರು.

"ಖಾಸಗಿ ವಲಯದ ವಜಾ ಹಾಗೂ ಸರ್ಕಾರಿ ನೇಮಕಾತಿಯನ್ನು ಸ್ಥಗಿತಗೊಳಿಸುವುದರಿಂದ ಯುವಕರ ಭವಿಷ್ಯವು ಹಾಳಾಗುತ್ತಿದೆ, ಆದರೆ ಸತ್ಯವನ್ನು ಮರೆಮಾಚಲು ಸರ್ಕಾರವು ಜಾಹೀರಾತುಗಳಲ್ಲಿ ಮತ್ತು ಭಾಷಣಗಳಲ್ಲಿ ಸುಳ್ಳು ಹೇಳುತ್ತಿದೆ" ಎಂದು ಪ್ರಿಯಾಂಕಾ ಗಾಂಧಿ 'ಖಾಸಗೀಕರಣವನ್ನು ನಿಲ್ಲಿಸಿ' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು "ಉದ್ಯೋಗ, ಮರುಸ್ಥಾಪನೆ, ಪರೀಕ್ಷೆಗಳ ಫಲಿತಾಂಶ ಪ್ರಕಟಣೆ" ಬಗೆಗೆ  ನರೇಂದ್ರ ಮೋದಿ ಸರ್ಕಾರಕ್ಕೆ ಮನವಿ ಮಾಡಿದರು. "ದೇಶದ ಯುವಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಿ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಏತನ್ಮಧ್ಯೆ, ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ ಅವರು ಬಡತನದ ಏರಿಕೆ ಬಗೆಗೆ ಕೇಂದ್ರದ ವಿರುದ್ಧ ಆರೋಪಿಸಿದ್ದಾರೆ. ಯುಪಿಎ  ಅವಧಿಯ ಬೆಳವಣಿಗೆ ಮತ್ತು ಬಡತನದ ಅಂಕಿಅಂಶಗಳನ್ನು ಅವರು ಪ್ರಸ್ತುತ ವಿವರಣೆಯಲ್ಲಿ ಉಲ್ಲೇಖಿಸಿದ್ದಾರೆ. ವಿಶ್ವಸಂಸ್ಥೆ ವರದಿಯನ್ನು ಉಲ್ಲೇಖಿಸಿ, ಇದು ಮಹಿಳೆಯರಲ್ಲಿ ಬಡತನದ ತ್ವರಿತ ಏರಿಕೆಯನ್ನು ತೋರಿಸುತ್ತದೆ ಎಂದು ಹೇಳಿದರು. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಕಾರ, 40 ಕೋಟಿ ಭಾರತೀಯರನ್ನು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಏಪ್ರಿಲ್-ಜೂನ್ ತಿಂಗಳಲ್ಲಿ ದೇಶದ ಆರ್ಥಿಕತೆಯು ಅತ್ಯಂತ ಕುಸಿತವನ್ನು ಅನುಭವಿಸಿದ ನಂತರ ಕಾಂಗ್ರೆಸ್ ಜೇಂದ್ರ ಸರ್ಕಾರದ ಮೇಲೆ ತನ್ನ ವಾಗ್ದಾಳಿ ಹೆಚ್ಚಿಸಿದೆ, ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ , ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 23.9 ರಷ್ಟು ಕುಸಿದಿದೆ. 

SCROLL FOR NEXT