ದೇಶ

ಉದ್ಯಮ ಸರಳೀಕರಣ: ಮತ್ತೊಮ್ಮೆ ಮೊದಲ ಸ್ಥಾನ ಪಡೆದ ಆಂಧ್ರ

Srinivas Rao BV

ಅಮರಾವತಿ: ಉದ್ಯಮ ಸರಳೀಕರಣದಲ್ಲಿ ಮತ್ತೊಮ್ಮೆ ಆಂಧ್ರಪ್ರದೇಶ ಮೊದಲ ಸ್ಥಾನ ಪಡೆದಿದೆ. 

ರಾಜ್ಯ, ಕೇಂದ್ರಾಡಳಿತ ಪ್ರದೇಶ (ಯುಟಿ)ಗಳಲ್ಲಿ ಉದ್ಯಮ ಸುಧಾರಣೆ ಕಾರ್ಯಸೂಚಿ ಯೋಜನೆಯ ಜಾರಿಯ ಆಧಾರದಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಂಚಿಕೊಂಡಿರುವ ವರದಿಯ ಮೂಲಕ ತಿಳಿದುಬಂದಿದೆ. 

ಆಂಧ್ರ ಮೊದಲ ಸ್ಥಾನದಲ್ಲಿದ್ದರೆ, ಎರಡು ಹಾಗೂ ಮೂರನೇ ಸ್ಥಾನಗಳಲ್ಲಿ ಅನುಕ್ರಮವಾಗಿ ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳಿವೆ ಎಂದು ಪ್ರೊಮೋಷನ್ ಆಫ್ ಇಂಡಸ್ಟ್ರಿ, ಇಂಟರ್ನಲ್ ಟ್ರೇಡ್ (ಡಿಪಿಐಐಟಿ) ತಯಾರಿಸಿರುವ ವರದಿ ಮೂಲಕ ತಿಳಿದುಬಂದಿದೆ.

ಕಟ್ಟಡ ಪರವಾನಗಿ, ಲೇಬರ್ ರೆಗ್ಯುಲೇಷನ್ಸ್, ಪರಿಸರ ನೋಂದಣಿ, ಮಾಹಿತಿ ಲಭ್ಯತೆ, ಭೂಮಿಯ ಲಭ್ಯತೆ, ಏಕಗವಾಕ್ಷಿ ವ್ಯವಸ್ಥೆ ಎಲ್ಲವನ್ನೂ ಪರಿಗಣಿಸಿ ಉದ್ಯಮ ಸರಳೀಕರಣ ಶ್ರೇಣಿಯನ್ನು ಘೋಷಿಸಲಾಗಿದೆ.

SCROLL FOR NEXT