ಆಗಸ್ಟ್ ತಿಂಗಳಲ್ಲಿ ಬೆಂಗಳೂರು ದಕ್ಷಿಣ ಝೋನ್ ಕೋವಿಡ್ ಮರಣ ಪ್ರಮಾಣ ಏರಿಕೆ 
ದೇಶ

ಆಗಸ್ಟ್ ತಿಂಗಳಲ್ಲಿ ಬೆಂಗಳೂರು ದಕ್ಷಿಣ ಝೋನ್ ಕೋವಿಡ್ ಮರಣ ಪ್ರಮಾಣ ಏರಿಕೆ

ಆಗಸ್ಟ್ ತಿಂಗಳಲ್ಲಿ ಬೆಂಗಳೂರು ದಕ್ಷಿಣ ಝೋನ್ ಕೋವಿಡ್-19 ಮರಣ ಪ್ರಮಾಣ ಏರಿಕೆ ಕಂಡಿದೆ. 

ಬೆಂಗಳೂರು: ಆಗಸ್ಟ್ ತಿಂಗಳಲ್ಲಿ ಬೆಂಗಳೂರು ದಕ್ಷಿಣ ಝೋನ್ ಕೋವಿಡ್-19 ಮರಣ ಪ್ರಮಾಣ ಏರಿಕೆ ಕಂಡಿದೆ. ಕೋವಿಡ್-19 ನಿಯಂತ್ರಣಕ್ಕಾಗಿ ಬೆಂಗಳೂರಿನಲ್ಲಿ 8 ಝೋನ್ ಗಳನ್ನು ರಚಿಸಲಾಗಿತ್ತು. ಈ ಪೈಕಿ ದಕ್ಷಿಣ ಝೋನ್ ನಲ್ಲಿ ಆಗಸ್ಟ್ ತಿಂಗಳಲ್ಲಿ ಮರಣ ಪ್ರಮಾಣ ದರ 2.18 ರಷ್ಟಿದೆ ಎಂದು ಝೋನಲ್ ಅಧಿಕಾರಿಗಳು ತಿಳಿಸಿದ್ದಾರೆ. 

ವಿಳಂಬಗತಿಯ ರಿಪೋರ್ಟಿಂಗ್, ಪರೀಕ್ಷೆಗಳಿಂದ ಜನರು ದೂರ ಉಳಿಯುತ್ತಿರುವುದು ಹಾಗೂ ಹಿರಿಯ ನಾಗರಿಕರಿಗೆ ಇರುವ ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಮರಣ ಪ್ರಮಾಣ ಏರಿಕೆ ಕಂಡಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. 

ಆಗಸ್ಟ್ ಮೊದಲ ವಾರದಲ್ಲಿ ಸಿಎಫ್ಆರ್ 2.14 ರಷ್ಟಿತ್ತು. ಎರಡನೇ ವಾರದಲ್ಲಿ 2.28, ಮೂರನೇ ವಾರದಲ್ಲಿ 2.69, ನಾಲ್ಕನೇ ವಾರದಲ್ಲಿ 1.59 ರಷ್ಟಿತ್ತು ಎಂದು ತಿಳಿದುಬಂದಿದೆ. 

ಕೋವಿಡ್-19 ರೋಗ ಪ್ರಾರಂಭವಾದಾಗಿನಿಂದಲೂ ಸಹ ದಕ್ಷಿಣ ಝೋನ್ ನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಈ ಪೈಕಿ ಬಿಟಿಎಂ ಲೇಔಟ್, ಬಸವನಗುಡಿ, ಜಯನಗರ, ಸುದ್ದಗುಂಟೆಪಾಳ್ಯ, ವಿಶ್ವೇಶ್ವರ ಪುರಂ, ಯಡಿಯೂರ್, ಪಟ್ಟಾಭಿರಾಮನಗರ, ಹೊಂಬೇಗೌಡನಗರಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. 

ಆಗಸ್ಟ್ ತಿಂಗಳಲ್ಲಿ ಕೊರೋನಾ ಪಾಸಿಟೀವ್ ಪ್ರಕರಣಗಳ ಪ್ರಮಾಣ ಶೇ.23 ರಿಂದ 18ಕ್ಕೆ ಇಳಿಕೆಯಾದರೂ ಮರಣ ಪ್ರಮಾಣ ಮಾತ್ರ ಏರಿಕೆಯಾಗಿದೆ.

"ರೋಗ ಲಕ್ಷಣಗಳು ಕಂಡುಬಂದರೂ ಸಹ ಜನರು ಆರೋಗ್ಯ ತಪಾಸಣೆ, ಪರೀಕ್ಷೆ ಮಾಡಿಸಿಕೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಆದ್ದರಿಂದ ಈ ರೀತಿಯಾಗಿದೆ ಎನ್ನುತ್ತಾರೆ ಬಿಬಿಎಂಪಿ ದಕ್ಷಿಣ ಝೋನ್ ನ ಆರೋಗ್ಯ ಅಧಿಕಾರಿ ಡಾ. ಶಿವಕುಮಾರ್ 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

1st T20I: ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

35 ಎಸೆತಗಳಲ್ಲಿ 84 ರನ್: 5000 ರನ್ ಸೇರಿದಂತೆ ಒಂದೇ ಪಂದ್ಯದಲ್ಲಿ 5 ದಾಖಲೆ ಮುರಿದ ಅಭಿಷೇಕ್ ಶರ್ಮಾ

ರಾಸಲೀಲೆ ಪ್ರಕರಣ: ಅಮಾನತುಗೊಂಡ ಡಿಜಿಪಿ ರಾಮಚಂದ್ರ ರಾವ್ ಸ್ಥಾನಕ್ಕೆ ಉಮೇಶ್ ಕುಮಾರ್ ನೇಮಕ

ಜಂಟಿ ಅಧಿವೇಶನ: ಸದನ ಕದನಕ್ಕೆ ಆಡಳಿತರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸಿದ್ಧತೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು ನಾವು ರೆಡಿ, ಆದರೆ RCB ಹಿಂಜರಿಯುತ್ತಿದೆ: ವೆಂಕಟೇಶ್ ಪ್ರಸಾದ್

SCROLL FOR NEXT