ದೇಶ

ವಾಹನ ಕಳ್ಳತನವಾಗಿದೆ ಎಂದು ಮಾಲೀಕ ದೂರು ದಾಖಲಿಸಿದ ಒಂದು ದಿನದ ನಂತರ ಓವರ್ ಸ್ಪೀಡ್ ಎಂದು ಚಲನ್ ನೀಡಿದ ಪೊಲೀಸರು

Lingaraj Badiger

ನವದೆಹಲಿ: ಪೂರ್ವ ದೆಹಲಿಯಿಂದ ಕಾರನ್ನು ಕಳ್ಳತನ ಮಾಡಲಾಗಿದೆ ಎಂದು ಕಾರ್ ಮಾಲೀಕರು ದೂರು ದಾಖಲಿಸಿದೆ 24 ಗಂಟೆಗಳ ನಂತರ ರಾಷ್ಟ್ರದ ರಾಜಧಾನಿಯ ಎನ್‌ಎಚ್ -10 ರಲ್ಲಿ ಅತಿವೇಗವಾಗಿ ಚಲಿಸಿದ್ದಕ್ಕಾಗಿ ಸಂಚಾರಿ ಪೊಲೀಸರು ಚಲನ್ ನೀಡಿದ್ದಾರೆ.

ಆಗಸ್ಟ್ 24 ರ ರಾತ್ರಿ ಪಶ್ಚಿಮ ವಿನೋದ್ ನಗರದ ಆಸ್ಪತ್ರೆಯ ಬಳಿ ವಾಹನವನ್ನು ನಿಲ್ಲಿಸಲಾಗಿದ್ದು, ಮರುದಿನ ಮಧ್ಯಾಹ್ನ ಕಾಣೆಯಾಗಿದೆ.

ಒಂದು ದಿನದ ನಂತರ, ವಾಹನವು ಮುಂಡ್ಕಾ ಬಳಿ ವೇಗದ ಮಿತಿಯನ್ನು ಉಲ್ಲಂಘಿಸಿರುವುದು ಕಂಡುಬಂದ ಕಾರಣ ದಂಡವನ್ನು ಪಾವತಿಸುವಂತೆ ಕಾರಿನ ಮಾಲೀಕರಿಗೆ ಸಂಚಾರಿ ಪೊಲೀಸರು ಚಲನ್ ಕಳುಹಿಸಿದ್ದಾರೆ.

ಅವರ ಪತ್ನಿ, ರಂಗಭೂಮಿ ಕಲಾವಿದೆ, ತುರ್ತು ಪರಿಸ್ಥಿತಿಯ ಕಾರಣ ಆಸ್ಪತ್ರೆಯ ಬಳಿ ಕಾರನ್ನು ರಸ್ತೆಯಲ್ಲಿ ನಿಲ್ಲಿಸಬೇಕಾಯಿತು. "ದುರದೃಷ್ಟವಶಾತ್, ಕುಟುಂಬ ತುರ್ತುಸ್ಥಿತಿ ಇರುವುದರಿಂದ ನಾನು ಕಾರನ್ನು ರಸ್ತೆಯ ಮೇಲೆ ನಿಲ್ಲಿಸಿದೆ" ಎಂದು ಅವರು ಹೇಳಿದ್ದಾರೆ.

ಕಾರು ಕಳ್ಳತನವಾದ ಬಗ್ಗೆ ಆಗಸ್ಟ್ 25ರಂದು ಆನ್ ಲೈನ್ ಮೂಲಕ ಎಫ್ಐಆರ್ ದಾಖಲಿಸಿರುವುದಾಗಿ ಕಾರು ಮಾಲೀಕರ ಪತ್ನಿ ಹೇಳಿದ್ದಾರೆ. ಆದರೆ ದೂರು ದಾಖಲಿಸಿದ ಒಂದು ದಿನದ ನಂತರ ಕಾರು ಪತ್ತೆಯಾಗಿದ್ದರೂ ಅದನ್ನು ವಶಕ್ಕೆ ಪಡೆಯದ ಪೊಲೀಸರು, ಓವರ್ ಸ್ಪೀಡ್ ಗಾಗಿ ಮಾಲೀಕರಿಗೆ ದಂಡ ವಿಧಿಸಿದ್ದಾರೆ.

SCROLL FOR NEXT