ದೇಶ

ಪಬ್​ಜಿ ಆಡಿ ಅಜ್ಜನ  2 ಲಕ್ಷ ಹಣ ಕಳೆದ ಮೊಮ್ಮಗ!

Raghavendra Adiga

ನವದೆಹಲಿ: ಪಬ್​ಜಿ ಆಡುವ ಚಟ ಬೆಳೆಸಿಕೊಂಡ ಬಾಲಕನೊಬ್ಬ ತನ್ನ ಜ್ಜನ ಖಾತೆಯಿಂದ ಬರೋಬ್ಬರಿ  2 ಲಕ್ಷ ರೂ. ಎಗರಿಸಿದ್ದ ಘಟನೆ ಮೊಹಾಲಿಯಲ್ಲಿ ನಡೆದಿದೆ.  15 ವರ್ಷದ ಬಾಲಕ ತನ್ನ ಶಾಲೆಯ ಸಹಚರರೊಂದಿಗೆ ಪಬ್​ಜಿ  ಆಡುತ್ತಿದ್ದ.ಲಾಕ್‌ಡೌನ್ ಸಮಯದಲ್ಲಿ ಆಡುತ್ತಾ ಅವನು ಅದರ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ.

ಟ್ರಿಬ್ಯೂನ್ ಇಂಡಿಯಾದ ವರದಿ ಹೇಳಿದಂತೆ ಬಾಲಕ ಈ ವರ್ಷ ಜನವರಿಯಿಂದ ಪಬ್​ಜಿ  ಆಟ ಆಡಲು ಪ್ರಾರಂಭಿಸಿದ್ದ. ಅವನ ಶಾಲೆಯ ಕೆಲವರೂ ಅವನೊಂದಿಗೆ ಸೇರಿದ್ದರು. ಇದರ ನಂತರವೇ ಅವನು ಆಟದ ವ್ಯಸನಿಯಾದ. ಆಡಲು ಹೆಚ್ಚು ಹೆಚ್ಚು ಸಮಯವನ್ನು ಕಳೆಯಲು ಪ್ರಾರಂಭಿಸಿದ.  ಮೊಬೈಲ್ ಪಾವತಿ ಮೂಲಕ ಆಟದ ಅನುಭವ ಹೆಚ್ಚಾಗುತ್ತದೆಂದು ಬಾಲಕನಿಗೆ ಅವನ ಆಟದ ಸಹಮಿತ್ರರು ಹೇಳಿದ್ದಾರೆ. ಅದನ್ನು ನಂಬಿದ ಬಾಲಕ ಅವನ ಅಜ್ಜನ ಬ್ಯಾಂಕ್ ಖಾತೆಯಿಂದ ಹಣ ಪಾವತಿಸಲು ಪ್ರಾರಂಭಿಸಿದ್ದ.

ಅಜ್ಜನ ಖಾತೆಯಲ್ಲಿದ್ದ ಪಿಂಚಣಿ ಹಣ ಖಾಲಿ ಮಾಡುತ್ತಾ ಹೋದ ಬಾಲಕ ಕಳೆದ 2 ತಿಂಗಳಲ್ಲಿ ಬ್ಯಾಂಕ್ ಖಾತೆಯಿಂದ 30  ಬಾರಿ ಹಣ ಪಾವತಿಸಿದ್ದಾನೆ, 

ಮಗುವಿನ ಚಿಕ್ಕಪ್ಪ ಈ ಬಗ್ಗೆ ವಿಚಾರಿಸಿದಾಗ ಬಾಲ್ಕ ತಾನು  ಪಬ್​ಜಿ ಗಾಗಿ ಇದುವರೆಗೆ  2 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಮಾತ್ರವಲ್ಲ ಆಟವಾಡಲು ಪ್ರತ್ಯೇಕ ಸಿಮ್ ಕಾರ್ಡ್ ಕೂಡ ಖರೀದಿಸಿದ್ದೇನೆ ಎಂದು ಖಚಿತಪಡಿಸಿದ್ದಾನೆ. ಪಂಕಜ್ ಕುಮಾರ್ ಎನ್ನುವವರ  ಗೂಗಲ್ ಪೇ ನಲ್ಲಿ ಹಣ ಪಾವತಿಸಿರುವುದನ್ನು ಒಪ್ಪಿಕೊಂಡ ಬಾಲಕ ಈಗ ಪೋಲೀಸರಿಗೆ ಶರಣಾಗಿದ್ದಾನೆ.
 

SCROLL FOR NEXT