ರಾಷ್ಟ್ರಪತಿ ಕೊವಿಂದ್ 
ದೇಶ

ರಾಷ್ಟ್ರಪತಿ ಕೊವಿಂದ್ ಅವರಿಗೆ ಸಿಂಗಾಪುರ ರಾಯಭಾರಿಯಿಂದ ‘ವಿಶ್ವಾಸಾರ್ಹ ಪತ್ರ’ ಅರ್ಪಣೆ

ಭಾರತದಲ್ಲಿರುವ ಸಿಂಗಾಪುರ ರಾಯಭಾರಿ ಸೈಮನ್ ವಾಂಗ್ ವೈ ಕುಯೆನ್ ಅವರು ಗುರುವಾರ ತಮ್ಮ ‘ವಿಶ್ವಾಸಾರ್ಹ ಪತ್ರ’ವನ್ನು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರಿಗೆ ವರ್ಚ್ಯುಯಲ್‍ ಸಮಾರಂಭದಲ್ಲಿ ಅರ್ಪಿಸಿದರು.

ನವದೆಹಲಿ: ಭಾರತದಲ್ಲಿರುವ ಸಿಂಗಾಪುರ ರಾಯಭಾರಿ ಸೈಮನ್ ವಾಂಗ್ ವೈ ಕುಯೆನ್ ಅವರು ಗುರುವಾರ ತಮ್ಮ ‘ವಿಶ್ವಾಸಾರ್ಹ ಪತ್ರ’ವನ್ನು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರಿಗೆ ವರ್ಚ್ಯುಯಲ್‍ ಸಮಾರಂಭದಲ್ಲಿ ಅರ್ಪಿಸಿದರು.

ವಿಶ್ವಾಸಾರ್ಹ ಪತ್ರವನ್ನು ಸ್ವೀಕರಿಸಿದ ಕೋವಿಂದ್ ಅವರು, ಇತ್ತೀಚೆಗೆ ಸಾರ್ವತ್ರಿಕ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಸಿಂಗಾಪುರ ಸರ್ಕಾರವನ್ನು ಅಭಿನಂದಿಸಿದ್ದಾರೆ. ಭಾರತ ಮತ್ತು ಸಿಂಗಾಪುರ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸದೃಢವಾಗಿವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿದಂತೆ ಪ್ರಮುಖ ವೇದಿಕೆಗಳಲ್ಲಿ ಭಾರತಕ್ಕೆ ನೀಡಿದ ದೃಢ ಬೆಂಬಲಕ್ಕಾಗಿ ರಾಷ್ಟ್ರಪತಿ ಸಿಂಗಾಪುರಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಪರಸ್ಪರ ಸಹಕಾರ, ಎರಡೂ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ಸ್ನೇಹ ಮತ್ತು ವಿಶ್ವಾಸದ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿದೆ ಎಂದು ರಾಷ್ಟ್ರಪತಿ ಈ ಸಂದರ್ಭದಲ್ಲಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ

‘ಸಿದ್ದರಾಮಯ್ಯಗೆ CD ತೋರಿಸಿ ರಾಜೀನಾಮೆ ಪಡೆದಿದ್ದಾರೆ’: ಯತ್ನಾಳ್​ ಸ್ಫೋಟಕ ಆರೋಪ

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!